ಕೆ.ಎಸ್.ಟಿ.ಎ. ಮಂಜೇಶ್ವರ ತಾಲೂಕು ಸಮ್ಮೇಳನ

ಉಪ್ಪಳ: ಕೇರಳ ಸೆ್ಟÃಟ್ ಟೈಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮ್ಮೇಳನ ನಿನ್ನೆ ಪೆರ್ಲ ಪಡ್ರೆ ಸಭಾ ಭವನದಲ್ಲಿ ನಡೆಯಿತು. ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರಾಜ್ಯ ಅಧ್ಯಕ್ಷ ರಾಮನ್ ಚೆನ್ನಿಕರೆ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಪಿಯು ಶಂಕರನ್, ರಾಜ್ಯ ಸಮಿತಿ ಸದಸ್ಯ ಮೋಹನ್‌ದಾಸ್ ಕುಂಬಳೆ, ಜಿಲ್ಲಾಧ್ಯಕ್ಷ ಸುರೇಶ್ ಭಟ್, ರಾಜ್ಯ ಸಮಿತಿ ಮÁಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಪಾವೂರು, ನಾರಾಯಣ ಕುಂಬಳೆ, ಚಂದ್ರನ್ ಪೆರ್ಲ, ತಾಲೂಕು ಉಪಾಧ್ಯಾಕ್ಷೆ ಲೇಖಾ.ಎಸ್ ಶುಭಾಂಶನೆ ಗೈದರು. ತಾಲೂಕು ಕಾರ್ಯದರ್ಶಿ ದಯಾನಂದ.ಪಿ ಸ್ವಾಗತಿಸಿ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಆಚಾರ್ಯ ವರದಿ ವಾಚಿಸಿದರು. ತಾಲೂಕು ಸಮಿತಿ ಕೋಶಾಧಿಕಾರಿ ವಿಜಯ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ತಾಲೂಕು ಕಾರ್ಯದರ್ಶಿ ಸಂತೋಷ್ ಶೆಟ್ಟಿ ವಂದಿಸಿದರು.

You cannot copy contents of this page