ಕೇಂದ್ರದಲ್ಲಿ ಸರಕಾರ ರಚಿಸುವ ಕಸರತ್ತು ಆರಂಭ
ಹೊಸದಿಲ್ಲಿ: ಲೋಕಸಭಾ ಚುನಾ ವಣೆಯ ಮತ ಎಣಿಕೆ ಪೂರ್ಣಗೊಂಡ ಸ್ಪಷ್ಟ ಚಿತ್ರಣ ಈಗಾಗಲೇ ಹೊರಬಿದ್ದಿದೆ. ಇದರ ಬೆನ್ನಲ್ಲೇ ಹೊಸ ಸರಕಾರದ ರಚನೆ ಗಾಗಿರುವ ಕಸರತ್ತು ಆರಂಭಗೊಂಡಿದೆ.
ಒಟ್ಟು 543 ಸಂಖ್ಯಾ ಬಲವಿರುವ ಸಂಸತ್ತ್ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 292 ಸ್ಥಾನಗಳಲ್ಲಿ ಗೆದ್ದು (ಕಳೆದ ಬಾರಿಗಿಂತ 70 ಸ್ಥಾನ ನಷ್ಟ) ಸರಳ ಬಹುಮತ ಪಡೆಯುವಲ್ಲಿ ಸಫಲ ಗೊಂಡಿದೆ. ಇನ್ನು ವಿಪಕ್ಷಗಳ ಒಕ್ಕೂಟ ವಾದ ಇಂಡಿಯಾಕ್ಕೆ 234 (ಕಳೆದ ಬಾರಿಗಿಂತ 114 ಸ್ಥಾನ ಅಧಿಕ) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇತ ರರು 17 ಸ್ಥಾನ ಪಡೆದುಕೊಂಡಿದ್ದಾರೆ.
ಸರಳ ಬಹುಮತ ಪಡೆಯಲು ಎನ್ಡಿಎಗೆ ಸಾಧ್ಯವಾಗಿದ್ದರೂ ನಿರೀಕ್ಷೆ ಗಿಂತಲೂ ಹೆಚ್ಚು ಸ್ಥಾನ ಲಭಿಸುವಲ್ಲಿ ವಿಫಲಗೊಂಡಿದೆ. ಇದರಿಂದಾಗಿ ಎನ್ಡಿಎ ಆವೇಶ ಈಗ ಮಂಕಾಗಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಸ್ಥಾನದಲ್ಲಿ ಕುಸಿತವುಂಟಾಗಿ ದ್ದರೂ ಗಳಿಸಿರುವ ಮತಗಳ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಶೇ. 31ರಷ್ಟು ಮತ ಲಭಿಸಿತ್ತು. ಈ ಬಾರಿ ಅದು ಶೇ. 36.61 ಕ್ಕೇರಿದೆ.
ಇದೇ ವೇಳೆ ಕಾಂಗ್ರೆಸ್ಗೆ ಲಭಿಸಿದ ಮತದ ಪ್ರಮಾಣವೂ ಈ ಬಾರಿ ಶೇ. 2ರಷ್ಟು ಹೆಚ್ಚಳ ಉಂಟಾಗಿದೆ. ಮಾತ್ರವಲ್ಲ ಕಳೆದ ಬಾರಿಗಿಂತಲೂ ಕಾಂಗ್ರೆಸ್ ಈ ಬಾರಿ 47 ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಲಭಿಸಲು 272 ಸ್ಥಾನಗಳ ಅಗತ್ಯವಿದೆ. ಆದರೆ ಬಿಜೆಪಿ ಈ ಬಾರಿ ಕೇವಲ 240 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರವೇ ಸಫಲವಾಗಿವೆ. ಇದರಿಂದಾಗಿ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಸರಕಾರ ರಚಿಸು ವಂತಿಲ್ಲ. ಇದರಿಂದಾಗಿ ಎನ್ಡಿಎ ಘಟಕ ಪಕ್ಷಗಳ ನೇತಾರರಾದ ತೆಲುಗುದೇಶಂನ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ರನ್ನು ಅವಲಂಬಿಸಬೇಕಾಗಿ ಬರಲಿದೆ. ಅದರಿಂದಾಗಿ ಒಂದು ವೇಳೆ ಎನ್ಡಿಎ ಸರಕಾರ ರಚಿಸಿದರೂ ಅದರ ಕೀಲಿ ಇನ್ನು ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ರ ಕೈಗೆ ಸೇರಲಿದೆ. ಅಧಿಕಾರಕ್ಕಾಗಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಈ ಹಿಂದೆ ಎನ್ಡಿಎ ಬಿಟ್ಟು ಹೊರ ನಡೆದ ಅನುಭವವೂ ಇದೆ. ಆದ್ದರಿಂದ ಇವರನ್ನು ಪೂರ್ಣವಾಗಿ ನಂಬುವಂತಿಲ್ಲ.
ಎನ್ಡಿಎ ಮಹತ್ತರ ಸಭೆ ಇಂದು: ನಾಯ್ಡು, ನಿತೀಶ್ ಭಾಗಿ
ನವದೆಹಲಿ: ದೆಹಲಿಯಲ್ಲಿ ಇಂದು ಬಿಜೆಪಿ ನೇತೃತ್ವದ ಎನ್ಡಿಎಯ ಮಹತ್ತರ ಸಭೆ ನಡೆಯಲಿದೆ. ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಟಿಡಿಪಿ ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಕೂಡಾ ಭಾಗವಹಿಸುವರು. ಇದಕ್ಕಾಗಿ ಇವರಿಬ್ಬರು ಇಂದು ಬೆಳಿಗ್ಗೆ ದಿಲ್ಲಿಗೆ ತೆರಳಿದ್ದಾರೆ.