ಕೇಂದ್ರದಿಂದ ಅವಗಣನೆ ಆರೋಪಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಸತ್ಯಾಗ್ರಹ
ದೆಹಲಿ: ಕೇಂದ್ರ ಸರಕಾರ ಆರ್ಥಿಕವಾಗಿ ಕೇರಳವನ್ನು ಅವಗಣಿಸುತ್ತಿದೆಯೆಂದು ಆರೋಪಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಚಳವಳಿಯಲ್ಲಿ ರಾಜ್ಯ ಸಚಿವರು, ಎಡರಂಗ ಶಾಸಕರು, ಸಂಸದರು ಭಾಗವಹಿಸುವರು. ದೆಹಲಿ ಪೊಲೀಸ್‌ನ ಅನುಮತಿ ಲಭಿಸಿದರೆ ಕೇರಳ ಹೌಸ್‌ನಿಂದ ಜಂತರ್ ಮಂತರ್‌ಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪ್ರತಿಭಟನೆಯಲ್ಲಿ ಎಎಪಿ, ಆರ್‌ಜೆಡಿ, ಎನ್‌ಸಿಪಿ, ಡಿಎಂಕೆ, ಜೆಎಂಎಂ ಸಹಿತ ಪಕ್ಷಗಳ ನೇತಾರರು ಭಾಗವಹಿಸಲಿದ್ದಾರೆಂದು ದೆಹಲಿಯ ಕೇರಳ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಇ.ಪಿ. ಜಯರಾಜನ್ ತಿಳಿಸಿದ್ದಾರೆ. ನವದೆಹಲಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಸತ್ಯಾಗ್ರಹ ನಡೆಯಲಿರುವಂತೆಯೇ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕೂಡಾ ದಿಲ್ಲಿಗೆ ತೆರಳಿದ್ದಾರೆ.