ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿದ ಸುರೇಶ್‌ಗೋಪಿ
ಹೊಸದಿಲ್ಲಿ: ತೃಶೂರಿನ ಸಂಸದ ಹಾಗೂ ನಟರಾಗಿರುವ ಸುರೇಶ್ ಗೋಪಿ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಹಾಯಕ ಸಚಿವರಾಗಿ ಇಂದು ಬೆಳಿಗ್ಗೆ ನವದೆಹಲಿಯ ಶಾಸ್ತ್ರಿ ಭವನದ ಪೆಟ್ರೋಲಿಯಂ ಸಚಿವಾಲಯದಲ್ಲಿ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂ ಡರು. ಕೇರಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಥಾನ ಗೆದ್ದು ತಾವರೆ ಅರಳಿಸಿ ಇತಿಹಾಸ ನಿರ್ಮಿಸಿರುವ ಸುರೇಶ್ ಗೋಪಿಗೆ ಕೇಂದ್ರ ಕ್ಯಾಬಿನೆಟ್ ಸಚಿವಸ್ಥಾನ ಲಭಿಸುವ ನಿರೀಕ್ಷೆಯನ್ನು ಹೆಚ್ಚಿನವರು ಹೊಂದಿದ್ದರು. ಆದರೆ ಅವರಿಗೆ ಸದ್ಯ ಸಹಾಯಕ ಸಚಿವ ಸ್ಥಾನ ನೀಡಲಾಗಿದೆ. ಮುಂದೆ ಅವರು ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಭಡ್ತಿಗೊಳ್ಳುವ ಸಾಧ್ಯತೆಯೂ ಇದೆ.
ಸಚಿವರಾಗಿ ಅಧಿಕಾರ ವಹಿಸಲು ಆಗಮಿಸಿದಾಗ ಅವರನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿಯವರು ಸ್ವಾಗತಿಸಿ ಸಚಿವ ಕುರ್ಚಿಯಲ್ಲಿ ಕುಳ್ಳಿರಿಸಿದರು. ಇಲಾಖೆಯ ಕಾರ್ಯದರ್ಶಿ ಆ ವೇಳೆ ಹಾಜರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ದೇಶ ಪ್ರಕಾರ ನಾನು ಸಚಿವರಾಗಿ ಕಾರ್ಯವೆಸಗುವೆ. ನನಗೆ ಅತೀ ದೊಡ್ಡ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಜನರಿಗಾಗಿ ನಾನು ಸದಾ ಕರ್ತವ್ಯ ನಿರ್ವಹಿಸುವೆ ಎಂದು ಸುರೇಶ್ ಗೋಪಿ ಸಚಿವ ಸ್ಥಾನ ವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಇದರ ಹೊರತಾಗಿ ಟ್ರಾನ್ಸ್‌ಪೋರ್ಟ್ ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯಾಲಯದಲ್ಲಿ ಸುರೇಶ್ ಗೋಪಿ ಇಂದು ಪ್ರವಾ ಸೋದ್ಯಮ ಸಹಾಯಕ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
ಇನ್ನು ಕೇಂದ್ರ ಸಚಿವ ಸಂಪುಟಕ್ಕೆ ಆರಿಸಲ್ಪಟ್ಟ ಕೇರಳದ ಇನ್ನೋರ್ವ ಸಚಿ ರಾಗಿ ಆರಿಸಲ್ಪಟ್ಟ ಜೋರ್ಜ್ ಕುರ್ಯನ್ ಅವರು ಅಲ್ಪಸಂಖ್ಯಾತ ಕಲ್ಯಾಣ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕಾ ಸಹಾಯಕ ಸಚಿವರಾಗಿ ಇಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.