ಕಾಸರಗೋಡು: ಕೇಂದ್ರ ಸರಕಾರದ ಹೆಲ್ತ್ ಸ್ಕೀಂ ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೂ, ನಿವೃತ್ತ ನೌಕರರಿಗೂ, ಅವರ ಆಶ್ರಿತರಿಗೂ ಚಿಕಿತ್ಸಾ ಸಹಾಯ ಯೋಜನೆಯಾದ ಸೆಂಟ್ರಲ್ ಗವರ್‌ಮೆಂಟ್ ಹೆಲ್ತ್ ಸ್ಕೀಂ ಈ ತಿಂಗಳ 1ರಿಂದ ತಲ ಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಆರಂಭಗೊಂಡಿದೆ. ಈ ಬಗ್ಗೆ ಒಪ್ಪಂದ ಪತ್ರದಲ್ಲಿ ಕ್ಯಾನ್ಸರ್ ಸೆಂಟರ್‌ನ ಡಾ| ಸತೀಶನ್ ಬಿ. ಹಾಗೂ ಸಿ.ಜಿ.ಎಚ್.ಎಸ್‌ನ ಹೆಚ್ಚುವರಿ ನಿರ್ದೇಶಕ ಡಾ| ನಿತಿನ್ ಸಹಿ ಹಾಕಿದ್ದಾರೆ. ಯೋಜನೆ ಪ್ರಕಾರ ನಿವೃತ್ತ ನೌಕರರಿಗೂ, ಅವರ ಆಶ್ರಿತರಿಗೆ ಉಚಿತವಾಗಿಯೂ, ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ, ಅವರ ಆಶ್ರಿತರಿಗೆ ರೀ ಇಂಬರ್ಸ್‌ಮೆಂಟ್ ವ್ಯವಸ್ಥೆಯಲ್ಲಿ ಯೋಜನೆಯ ಸೌಲಭ್ಯ ಲಭಿಸುವುದು.
