ಪೈವಳಿಕೆ: ಕೇಂದ್ರ ಸರಕಾರದ ರೈತ ವಿರೋಧಿ ನೀತಿಗೆದುರಾಗಿ ಒಂದು ವರ್ಷದವರೆಗೆ ನಡೆದ ಹೋರಾಟದಿಂದ ಕೇಂದ್ರ ಸರಕಾರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದಾಗ ರೈತರು ಹೋರಾಟವನ್ನು ನಿಲ್ಲಿಸಿದ್ದರು. ಆದರೆ ಕೇಂದ್ರ ಸರಕಾರ ಭರವಸೆಯನ್ನು ಒಂದು ವರ್ಷವಾದರೂ ಈಡೇರಿಸದ ಹಿನ್ನೆಲೆಯಲ್ಲಿ ಸಿಐಟಿಯು ರೈತ ಸಂಘ ಕರ್ಷಕ ಕಾರ್ಮಿಕ ಯೂನಿಯನ್ ಒಟ್ಟು ಸೇರಿ ದೇಶದ ಎಲ್ಲಾ ಮಂಡಲ ಗಳಲ್ಲಿ ಅ.೩ರಂದು ಕಪ್ಪು ದಿನಾಚರಣೆ ನಡೆಸಲಾಯಿತು. ಇದರಂತೆ ಮಂಜೇಶ್ವರ ನಿಯೋಜಕ ಮಂಡಲದ ಕರಿ ದಿನಾ ಚರಣೆ, ಸಂಜೆ ಧರಣಿಯನ್ನು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಸಿಐಟಿಯು ನೇತಾರೆ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕೃಷಿ ಕಾರ್ಮಿಕರ ಯೂನಿಯನ್‌ನ ಬಾಲಕೃಷ್ಣನ್, ಅಬ್ದುಲ್ ರಜಾಕ್ ಚಿಪ್ಪಾರ್, ಸಿಐಟಿಯು ನೇತಾರ ಚಂದ್ರ ನಾಕ್ ಮಾನಿಪ್ಪಾಡಿ, ಬಾಲಪ್ಪ ಬಂಗೇರ, ಪ್ರಶಾಂತ್ ಕನಿಲ, ಕಮಲಾಕ್ಷ ಮಾತನಾಡಿದರು. ಕೆ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಹುಸೈನ್ ಮಾಸ್ತರ್, ಅಬ್ದುಲ್ಲ ಕೆ, ಸದಾ ನಂದ ಕೋರಿಕ್ಕಾರ್ ಉಪಸ್ಥಿತರಿದ್ದರು.
