ಕೇಂದ್ರ ಹಣಕಾಸು ಸಚಿವೆ-ಮುಖ್ಯಮಂತ್ರಿ ಚರ್ಚೆ
ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗೆ ದೆಹಲಿಯಲ್ಲಿ ಚರ್ಚೆ ನಡೆಸಿದರು. ಕೇರಳ ಹೌಸ್‌ನಲ್ಲಿ ನಡೆದ ಮಾತುಕತೆಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹಾಗೂ ಪ್ರೊ. ಕೆ.ವಿ. ಥೋಮಸ್ ಕೂಡಾ ಪಾಲ್ಗೊಂಡಿದ್ದರು. ವಯನಾಡು ಪುನರ್ವಸತಿಗಿರುವ ಸಾಲ ವಿನಿಯೋಗ ಕಾಲಾವಧಿ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು. ನಷ್ಟಗೊಂಡ ಕೇಂದ್ರ ಸಹಾಯವನ್ನು ಈ ಹಿಂದಿನ ಕಾಲಾವಧಿಗೆ ಅನುಸರಿಸಿ ನೀಡಬೇಕೆಂದೂ ಆಗ್ರಹಪಡಲಾ ಯಿತು. ವಯನಾಡ್, ವಿಳಿಂಞ್ಞಂ, ಸಾಲ ಮೊತ್ತ ಸಹಿತ ಕೇರಳದಲ್ಲಿ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಇದೇ ವೇಳೆ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಆಗ್ರಹಿಸಿ ತಿರುವನಂತಪುರ ಸೆಕ್ರೆಟರಿ ಯೇಟ್ ಮುಂದೆ ನಡೆಸುತ್ತಿರುವ ಚಳವಳಿ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲವೆನ್ನಲಾಗಿದೆ. ಕೇರಳ ಮುಂದಿರಿಸಿದ ಬೇಡಿಕೆಗಳನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ