ಕೇಜ್ರಿವಾಲ್ರಿಗೆ ಸುಪ್ರಿಂಕೋರ್ಟ್ನಿಂದ ಜಾಮೀನು ಮಂಜೂರು
ದೆಹಲಿ: ಮದ್ಯನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ರಿಗೆ ಜಾಮೀನು ಲಭಿಸಿದೆ. ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮದ್ಯನೀತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಪ್ಪು ಹಣವನ್ನು ಸಾದುಗೊಳಿಸಿದ ಪ್ರಕರಣದಲ್ಲಿ ಜೂನ್ 26ರವರೆಗೆ ಸಿಬಿಐ ಕೇಜ್ರಿವಾಲ್ರಿಗೆ ಮಧ್ಯಂತರ ಜಾಮೀನು ನೀಡಲು ಆಗಸ್ಟ್ 14ರಂದು ಸುಪ್ರಿಂಕೋರ್ಟ್ ಸಮ್ಮತಿಸಿರಲಿಲ್ಲ. ಸಿಬಿಐಯಿಂದ ವಿವರಣೆಯನ್ನು ನ್ಯಾಯಾಲಯ ಆಗ್ರಹಿಸಿತ್ತು. ಮಾರ್ಚ್ 21ರಂದು ಈ ವಿಷಯದಲ್ಲಿ ಮೊದಲ ಸೆರೆ ನಡೆಸಲಾಗಿದೆ. ಅಂದು ಇ.ಡಿ ಕೇಜ್ರಿವಾಲ್ರನ್ನು ಬಂಧಿಸಿತ್ತು. ಬಳಿಕ ಸುಪ್ರಿಂಕೋರ್ಟ್ನಿಂದ 21 ದಿನಕ್ಕೆ ಜಾಮೀನು ಲಬಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಮೇ 10ರಂದು ಮತ್ತೆ 21 ದಿನದ ಜಾಮೀನು ಕೇಜ್ರಿವಾಲ್ರಿಗೆ ಲಭಿಸಿತ್ತು. ಆ ಬಳಿಕ ಜೂನ್ 2ರಂದು ಅವರು ಜೈಲಿಗೆ ಹಿಂತಿರುಗಿದ್ದರು. ಈಗ ಮತ್ತೆ ಜಾಮೀನು ಲಭಿಸಿದೆ.