ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 430ಕ್ಕೇರಿಕೆ
ಕಾಸರಗೋಡು: ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ ಈಗ 430ಕ್ಕೇರಿದೆ. ಕಳೆದ ಸೋಮವಾರ ತನಕದ ಲೆಕ್ಕಾಚಾರ ಪ್ರಕಾರ ರಾಜ್ಯ ದಲ್ಲಿ 335 ಕೋವಿಡ್ ಬಾಧಿತರಿ ದ್ದರು. ಅದಾದ ಒಂದು ವಾರದಲ್ಲಿ ಆ ಸಂಖ್ಯೆ ಈಗ 430ಕ್ಕೇರಿದೆ.
ಕೋಟ್ಟಯಂ, ತಿರುವನಂತಪುರ, ಎರ್ನಾಕುಳಂ, ಪತ್ತನಂತಿಟ್ಟ ಮತ್ತು ತೃಶೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಹರಡಿದೆ. ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಯಲ್ಲಿ ಕಳೆದ ವಾರ ಇಬ್ಬರು ಕೋವಿಡ್‌ನಿಂದ ಸಾವನ್ನಪ್ಪಿ ದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೀತ, ನೆಗಡಿ, ಗಂಟಲುನೋವು, ಉಸಿರಾಟ ತೊಂದರೆ ಇತ್ಯಾದಿ ರೋಗ ಲಕ್ಷಣವಿರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಹೊಸ ನಿರ್ದೇಶವನ್ನು ರಾಜ್ಯ ಆರೋಗ್ಯ ಇಲಾಖೆ ನೀಡಿದೆ. ಇದರ ಹೊರತಾಗಿ ಗರ್ಭಿಣಿ ಯರು, ಹಿರಿಯ ನಾಗರಿಕರು ಮತ್ತು ಇತರ ಗಂಭೀರ ಕಾಯಿಲೆ ಯಿಂದ ಬಳಲುತ್ತಿರುವವರು ಪ್ರಯಾಣ ವೇಳೆ ಮಾಸ್ಕ್ ಧರಿಸಬೇಕು. ಆರೋಗ್ಯ ಕಾರ್ಯಕರ್ತ ರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಆಸ್ಪತ್ರೆ ಸಂದರ್ಶಿಸುವುದನ್ನು ಹೊರತುಪಡಿ ಸಬೇಕು. ಕೈಗಳನ್ನು ಪದೇ ಪದೇ ಸಾಬೂನಿನಿಂದ ತೊಳೆಯ ಬೇಕೆಂಬ ನಿರ್ದೇಶಗಳನ್ನು ಇಲಾಖೆ ನೀಡಿದೆ.
ದೇಶದಲ್ಲಿ ಈಗ ಅತೀ ಹೆಚ್ಚು ಕೋವಿಡ್ ಸೋಂಕು ಬಾಧಿತರ ರಾಜ್ಯ ಕೇರಳವಾಗಿದೆ. ಮಹಾರಾಷ್ಟ್ರದಲ್ಲಿ 209, ದಿಲ್ಲಿ 104, ಗುಜರಾತ್ 83, ತಮಿಳು ನಾಡು 69 ಮತ್ತು ಕರ್ನಾಟಕದಲ್ಲಿ 47 ಕೋವಿಡ್ ಸೋಂಕು ಬಾಧಿತರಿ ದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಸೂಚಿಸುತ್ತದೆ.