ಕೇರಳದಿಂದ ಪ್ರತಿಭಾ ಪಲಾಯನ ತಡೆಗಟ್ಟುವಂತಿಲ್ಲ- ಸಚಿವೆ
ಕಾಸರಗೋಡು: ಉನ್ನತ ಹಾಗೂ ಅರ್ಹ ಶಿಕ್ಷಣಕ್ಕಾಗಿ ಕೇರಳದ ವಿದ್ಯಾರ್ಥಿಗಳು ವಿದೇಶ ಪಲಾಯನವನ್ನು ತಡೆಗಟ್ಟುವವಂತಿ ಲ್ಲವೆಂದು ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸುವ ಯತ್ನಗಳನ್ನು ತಡೆಯುವಂತಿಲ್ಲ. ಹೀಗೆ ಪ್ರತಿಭಾ ಪಲಾಯನ ಕೇವಲ ಕೇರಳಕ್ಕೆ ಮಾತ್ರವಾಗಿ ಬಾಧಿಸುವ ಸಮಸ್ಯೆಯಲ್ಲ. ದೇಶದ ಇತರ ರಾಜ್ಯಗಳಿಂದಲೂ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಸಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ರಾಜ್ಯಗಳಲ್ಲಿ ಪ್ರತಿಭಾ ಪಲಾಯನ ಅತೀ ಕಡಿಮೆ ಇರುವ ರಾಜ್ಯ ಕೇರಳವಾಗಿದೆ. ಭಾರತದಿಂದ ಕಲಿಕೆಗಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಲ್ಲೂ ಕೇರಳದ ಶೇ. 4ರಷ್ಟು ವಿದ್ಯಾರ್ಥಿಗಳು ಮಾತ್ರವೇ ಒಳಗೊಂಡಿದ್ದಾರೆಂದು ಸಚಿವರು ಹೇಳುತ್ತಾರೆ.
ಹೆಚ್ಚುಕಡಿಮೆ 35,000 ದಿಂದ 4೦,೦೦೦ದಷ್ಟು ವಿದ್ಯಾರ್ಥಿಗಳು ಪ್ರತೀ ವರ್ಷ ಉನ್ನತ ಶಿಕ್ಷಣಕ್ಕಾಗಿ ಕೇರಳದಿಂದ ಹೊರಹೋಗುತ್ತಿದ್ದಾರೆ. ಶಿಕ್ಷಣದ ಜತೆಗೆ ಉದ್ಯೋಗವೂ ಲಭಿಸುವ ಉದ್ದೇಶದಿಂದ ಅವರು ಬೇರೆಡೆಗಳಿಗೆ ಹೋಗುತ್ತಿದ್ದಾರೆ. ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ಉದ್ಯೋಗ ಕೌಶಲ್ಯ ಅಥವಾ ನಿಪುಣರಾದ ಉದ್ಯೋಗಾ ರ್ಥಿಗಳನ್ನು ತಮ್ಮ ದೇಶಗಳಿಗೆ ಆಕರ್ಷಿಸುವಂತೆ ಮಾಡಲು ವಿಸಾ ಕಾನೂನಿನಲ್ಲಿ ಭಾರೀ ಸಡಿಲಿಕೆ ನೀಡುತ್ತಿವೆ. ಇದು ಭಾರತದಿಂದ ಪ್ರತಿಭಾಪಲಾಯನಕ್ಕೆ ಹೆಚ್ಚು ಬಾರಿ ಮಾಡಿಕೊಡುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳನ್ನು ತಡೆಯಲು ಸರಕಾರ ಯಾವುದೇ ರೀತಿಯ ಉದ್ದೇಶವನ್ನು ಹೊಂದಿಲ್ಲ ವೆಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.