ಕೇರಳದ ರೈಲ್ವೇ ಅಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ 3011 ಕೋಟಿ ರೂ. ಮೀಸಲು
ತಿರುವನಂತಪುರ: ಕೇರಳದಲ್ಲಿ ರೈಲ್ವೇ ಅಭಿವೃದ್ಧಿಗೆ ಕೇಂದ್ರ ಸರಕಾರದ 2024-2025ನೇ ಸಾಲಿನ ಪೂರ್ಣ ಬಜೆಟ್ನಲ್ಲಿ 3011 ಕೋಟಿ ರೂ. ಮೀಸಲಿರಿಸಿದೆ.
2009ರಿಂದ 2014ರ ತನಕದ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಐದು ವರ್ಷಗಳ ಅವಧಿಯಲ್ಲಿ ಕೇರಳದ ರೈಲ್ವೇ ಅಭಿವೃದ್ಧಿಗೆ ಕೇವಲ 372 ಕೋಟಿ ರೂ.ವನ್ನು ಮಾತ್ರವೇ ಮಂಜೂರು ಮಾಡಿತ್ತು. ಅಂತಹ ಜಾಗದಲ್ಲಿ ಈಗಿನ ಕೇಂದ್ರ ಬಜೆಟ್ನಲ್ಲಿ ಕೇರಳಕ್ಕೆ 3011 ಕೋಟಿ ರೂ. ತೆಗೆದಿರಿಸಲಾಗಿ ದೆಯೆಂದು ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಅಂದರೆ ಈ ಹಿಂದಿನ ಯುಪಿಎ ಸರಕಾರ ಕೇರಳಕ್ಕೆ ನೀಡಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ಈಗಿನ ಬಜೆಟ್ನಲ್ಲಿ ಮೀಸಲಿರಿಸಲಾಗಿ ದೆಯೆಂದು ಸಚಿವರು ತಿಳಿಸಿದ್ದಾರೆ.
ಶಬರಿಮಲೆ ರೈಲು ಯೋಜನೆ ಗಳಿಗೆ ಸಲ್ಲಿಸಲಾದ ವರದಿ ಸರಕಾರಕ್ಕೆ ಲಭಿಸಿದೆ. ಅದನ್ನು ಪರಿಶೀಲಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕೇರಳದ ರೈಲು ಹಳಿಗಳನ್ನು ಮೂರು ಹಳಿಗನ್ನಾಗಿ ಸಲು ಕ್ರಮ ಕೈಗೊಳ್ಳಲಾಗುವುದು.
ಕೇರಳದ 35 ರೈಲು ನಿಲ್ದಾಣಗಳ ನವೀಕರಣೆಯನ್ನು ಅಮೃತ್ ಭಾರತ್ ಯೋಜನೆಯಲ್ಲಿ ಒಳಪಡಿಸಲಾಗಿದೆ ಯೆಂದು ಸಚಿವರು ತಿಳಿಸಿದರು