ಕೇರಳ ಜರ್ನಲಿಸ್ಟ್‌ಸ್ ಯೂನಿಯನ್ ಜಿಲ್ಲಾ ಸಮ್ಮೇಳನ ನಾಳೆಯಿಂದ
ಕುಂಬಳೆ: ಕೇರಳ ಜರ್ನಲಿಸ್ಟ್‌ಸ್ ಯೂನಿಯನ್ ಜಿಲ್ಲಾ ಸಮ್ಮೇಳನ ನಾಳೆ, 26ರಂದು ಒಳೆಯಂ ನದಿ ತೀರದಲ್ಲಿರುವ ಡಿ.ಎಂ. ಕಬಾನ ರೆಸೋರ್ಟ್‌ನಲ್ಲಿ ನಡೆಯಲಿದೆ. ನಾಳೆ ಸಂಜೆ 4 ಗಂಟೆಗೆ ಧ್ವಜಾರೋಹಣ, 26ರಂದು ಬೆಳಿಗ್ಗೆ 9.30ಕ್ಕೆ ನೋಂದಾವಣೆ, 10.30ಕ್ಕೆ ಶಾಸಕ ಎಕೆಎಂ ಅಶ್ರಫ್‌ರಿಂದ ಉದ್ಘಾ ಟನೆ ನಡೆಯಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಸುರೇಂದ್ರನ್ ಚೀಮೇನಿ ಅಧ್ಯಕ್ಷತೆ ವಹಿಸುವರು. ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಸಂಘಟನೆಯ ರಾಜ್ಯ ಅಧ್ಯಕ್ಷ ಅನಿಲ್ ಬಿಶ್ವಾಸ್ ಮುಖ್ಯ ಅತಿಥಿಗಳಾಗಿರುವರು. ಪ್ರಧಾನ ಕಾರ್ಯದರ್ಶಿ ಕೆ.ಸಿ. ಸ್ಮಿಜನ್ ಪ್ರಧಾನ ಭಾಷಣ ಮಾಡುವರು. ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸು ವರು ಎಂದು ಸಂಘಟನೆಯ ಪದಾಧಿ ಕಾರಿಗಳು ತಿಳಿಸಿದ್ದಾರೆ. ಬಳಿಕ ಪ್ರತಿನಿಧಿ ಸಮ್ಮೇಳನವನ್ನು ಸಂಘಟನೆಯ ರಾಜ್ಯಾ ಧ್ಯಕ್ಷ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.