ಕೇರಳ ಪೊಲೀಸ್ ಕಬಡ್ಡಿ ಪಟುಗಳಿಗೆ ಸ್ವಾಗತ

ಕಾಸರಗೋಡು: ಹರಿಯಾ ಣದಲ್ಲಿ ನಡೆದ ೭೨ನೇ ಪೊಲೀಸ್ ರಸಲಿಂಗ್ ಕ್ಲಸ್ಟರ್ ವಿಭಾಗದಲ್ಲಿ ಕಬಡ್ಡಿಯಲ್ಲಿ ಸ್ಪರ್ಧಿಸಿ ಕೇರಳಕ್ಕೆ ಅಭಿಮಾನ ತಂದ ಕೇರಳ ಪೊಲೀಸ್ ಕಬಡ್ಡಿ ತಂಡಕ್ಕೆ ಜಿಲ್ಲಾ ಪೊಲೀಸ್ ಹಾಗೂ ಕೆಪಿಎ ರೈಲ್ವೇ ಪೊಲೀಸ್ ಘಟಕದ ಜಂಟಿ ಆಶ್ರಯದಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ಕೆ.ಪಿ.ಒ.ಎ ಜಿಲ್ಲಾಧ್ಯಕ್ಷ,ಕಾಸರಗೋಡು ಸರ್ಕಲ್ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಕ್ರೀಡಾ ತಾರೆಗಳನ್ನು ಸ್ವಾಗತಿಸಿದರು. ಕೆ.ಪಿ.ಒ.ಎ ರಾಜ್ಯ ಜೊತೆ ಕಾರ್ಯ ದರ್ಶಿ ಪಿ.ಪಿ. ಮಹೇಶ್, ಕೆ.ಪಿ.ಎ. ಜಿಲ್ಲಾಧ್ಯಕ್ಷ ಒ. ರಾಜ್ ಕುಮಾರ್, ಕಾರ್ಯದರ್ಶಿ  ಎ.ಪಿ. ಸುರೇಶ್, ರೈಲ್ವೇ ಸ್ಟೇಶನ್ ಸುಪರಿಂಟೆಂಡೆಂಟ್ ಶ್ರೀಲೇಖಾ, ರೈಲ್ವೇ ಪೊಲೀಸ್ ಎಸ್‌ಐ ರಜಿ ಕುಮಾರ್, ಆರ್‌ಪಿಎಫ್ ಎಸ್‌ಐ ಕದಿರೇಶ್‌ಬಾಬು, ಎಸ್‌ಐ ವಿಷ್ಣುಪ್ರ ಸಾದ್, ಡಿಎಚ್ ಕ್ಯೂಐಎಸ್‌ಐ ನಾರಾಯಣನ್, ಅಜಯನ್ ಭಾಗವಹಿಸಿದರು. ಜಿಲ್ಲೆಯಿದ ೧೦ ಕಬಡ್ಡಿ ಪಟುಗಳು ರಾಜ್ಯ ಪೊಲೀಸ್ ತಂಡಕ್ಕಾಗಿ ಸ್ಪರ್ಧಿಸಿದ್ದರು.

RELATED NEWS

You cannot copy contents of this page