ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಅನ್ವಿತ ಆರ್.ವಿ. ಆಯ್ಕೆ
ಕಾಸರಗೋಡು: ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನ್ವಿತ ಆರ್.ವಿ. ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕಾಸರಗೋಡು ಜಿಲ್ಲಾ ಶಾಲಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾಳೆ.
ಕಾರಡ್ಕ ನೆಚ್ಚಿಪಡ್ಪು ರಾಮಚಂದ್ರ-ವಿದ್ಯಾ ದಂಪತಿ ಪುತ್ರಿಯಾದ ಅನ್ವಿತ ಆರ್.ವಿ. 14 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದು, ತನ್ನ ಮೊದಲ ಪ್ರಯತ್ನದಲ್ಲೇ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಈ ಹಿಂದೆ ಜಿಲ್ಲಾ ತಂಡದ ಉಪನಾಯಕಿಯಾಗಿಯೂ, 15 ವರ್ಷಕ್ಕಿಂತ ಕೆಳಗಿನ ಉತ್ತರ ವಲಯ ತಂಡದಲ್ಲಿ ಕಳೆದ 2 ಸಲವೂ, 19 ವರ್ಷ ಕೆಳಗಿನ ಉತ್ತರ ವಲಯ ತಂಡದಲ್ಲೂ ಭಾಗವಹಿಸಿದ್ದಾಳೆ. ಕೆ.ಸಿ.ಎ. 15 ವರ್ಷಕ್ಕಿಂತ ಕಿರಿಯ ರಾಜ್ಯ ಆಯ್ಕೆ ತಂಡದಲ್ಲಿ ಭಾಗವಹಿಸಿದ್ದಾರೆ.