ಕೇರಳ ಸರಕಾರ ಟೈಲರ್‌ಗಳನ್ನು ವಂಚಿಸುತ್ತಿದೆ-ಟೈಲರ್ಸ್ ಸಂಘ
ಉಪ್ಪಳ: ಭಾರತೀಯ ಟೈಲರ್ಸ್ ಸಂಘ ಬಿಎಂಎಸ್ ಇದರ ಜಿಲ್ಲಾ ಸಮ್ಮೇಳನ ನಿನ್ನೆ ಕಾಸರಗೋಡು ರೋಟರಿ ಭವನದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ದಿನೇಶ್ ಬಂಬ್ರಾಣ ರವರು ಅಧ್ಯಕ್ಷತೆ ವಹಿಸಿದರು. ಟೈಲರ್ಸ್ ಸಂಘದ ರಾಜ್ಯ ಉಪಾ ಧ್ಯಕ್ಷ ಸಿ. ವಿ ತಂಬಾನ್ ಉದ್ಘಾ ಟಿಸಿ ಮಾತನಾಡಿ, ಕೇರಳ ಸರಕಾರ ಟೈಲರಿಂಗ್ ಕೆಲಸ ಮಾಡುವ ಕಾರ್ಮಿಕರ ಕ್ಷೇಮನಿಧಿ ಅಂಶಾ ದಾಯ ಹೆಚ್ಚಿಸಿ ಅದಕ್ಕೆ ಅನುಗುಣ ವಾಗಿ ಸವಲತ್ತುಗಳನ್ನು ನೀಡದೆ ಕಾರ್ಮಿಕರಿಗೆ ವಂಚಿಸುತ್ತಿರುವ ಕೇರಳ ಸರಕಾರದ Àವಂಚನೆಯನ್ನು ಕಾರ್ಮಿಕರು ಅರಿತುಗೊಳ್ಳಬೇಕು ಎಂದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್, ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ವಾಯಕ್ಕೋಡ್, ಯಶವಂತಿ ಬೆಜ್ಜ ಶುಭಾಂಶನೆಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಬಾಲಕೃಷ್ಣನ್ ವರದಿ ಮಂಡಿಸಿದರು. ವಿದ್ಯಾ ಪರವನಡ್ಕ ಲೆಕ್ಕ ಪತ್ರ ಮಂಡಿಸಿದರು ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಕೃಷ್ಣನ್ ಪುಲ್ಲೂರ್ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಿದರು. ಶ್ಯಾಮಲಾ ಪರವನಡ್ಕ ಸ್ವಾಗತಿಸಿ, ಚಿತ್ರಲೇಖ ಮಾವಿನಕಟ್ಟೆ, ಜಿಲ್ಲೆಯ ವಿವಿಧ ಟೈಲರಿಂಗ್ ಯೂನಿಟ್ ನ ಪದಾಧಿಕಾರಿಗಳು ಭಾಗವಹಿಸಿದರು.