ಕೊಂಡೆವೂರು ಮಠದಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ವಿತರಣೆ: ಆಯುಶ್ರೀ ಪ್ರಶಸ್ತಿ ಪ್ರದಾನ
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ದಲ್ಲಿ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲ್ಲಿ ಔಷಧೀಯ ಗಿಡಮೂಲಿಕೆ ಗಳಿಂದ ಹಾಗೂ ಪರಿಸರದಲ್ಲಿ ದೊರಕುವ ಗಿಡ, ಎಲೆ, ಹೂ ಇತ್ಯಾದಿಗಳನ್ನು ಬಳಸಿ ತಯಾರಿಸುವ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯ ಕ್ರಮ ನಡೆಯಿತು. ಮಂಗಳೂರು ಕರ್ನಾಟಕ ಆರ್ಯುವೇದ ಕಾಲೇಜಿನ ಪ್ರಾಂಶುಪಾಲರು ಡಾ. ರವಿರಾವ್, ಮತ್ತು ಮಲಪ್ಪುರಂ ಗಂಗಾಧರನ್ ಉಣ್ಣಿ ವೈದ್ಯರ್ ಕರ್ಕಾಟಕ ಮಾಸದ ಔಷಧಿ ಗಂಜಿಯ ಮಹತ್ವದ ಬಗ್ಗೆ ಕಾರ್ಯಾಗಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವ ಲಿಸಿ, ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ನೂರಾರು ವಿಷಬಾಧಿತರಿಗೆ ಚಿಕಿತ್ಸೆಯನ್ನು ನೀಡಿರುವ ಕಿನ್ನಿಂಗಾರು ಸಸಿಹಿತ್ಲುವಿನ ನಾಟಿ ವೈದ್ಯೆ ಶ್ಯಾಮಲಾ ರೈ ಇವರಿಗೆ ಶ್ರೀಗಳು “ಆಯುಶ್ರೀ-2024” ಪುರಸ್ಕಾರ ನೀಡಿ ಆಶೀ ರ್ವದಿಸಿದರು. ಶ್ರೀ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ ಜೆ ಜಯದೇವನ್ ಕಣ್ಣೂರ್ ಅಧ್ಯಕ್ಷತೆಯನ್ನು ವಹಿಸಿದರು.
ಮಂಜೇಶ್ವರ ತಾಲೂಕಿನ ತಹಶೀಲ್ದಾರ್ ಶಿಬು, ಚಂದ್ರಶೇಖರ್ ಬೆಂಗಳೂರು, ಮಂಗಳೂರಿನ ಸುಲೋಚನ ಭಟ್, ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟಂ ಉಪಸ್ಥಿತರಿದ್ದರು. ಕಣ್ಣೂರಿನ ಖ್ಯಾತ ನಾಟಿ ವೈದ್ಯ ಪವಿತ್ರನ್ ಗುರುಕ್ಕಳ್ ಮತ್ತು ಹಲ ಸಿನ ವಿವಿಧ ತಳಿಗಳ ಬಗ್ಗೆ ಸಂಶೋದನೆ ನಡೆಸಿದ ಶೀಬಾ ಸತೀಶ್ ಕಣ್ಣೂರು ಇವರಿಗೂ ಶಾಲು ಹಾಕಿ ಗೌರವಿಸಲಾಯಿತು. ಸುಮಂಗಲ ಮಂಗಳೂರು ಪ್ರಾರ್ಥನೆ, ಗಂಗಾಧರ್ ಕೊಂಡೆವೂರು ಸ್ವಾಗತಿಸಿ ದರು. ಕಾರ್ಯಕ್ರಮವನ್ನು ದಿನಕರ್ ಹೊಸಂಗಡಿ ವಂದಿಸಿ ನಿರೂಪಿಸಿದರು. ಔಷಧೀಯ ಗಂಜಿಯನ್ನು 1000 ಕ್ಕೂ ಹೆಚ್ಚು ಜನರು ಸವಿದರು.