ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ, ಸನ್ಮಾನ 26ರಂದು
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಈ ತಿಂಗಳ 26ರಂದು ಇಲ್ಲಿನ ಗಾಯತ್ರಿ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಮರ್ ಜವಾನ್ ಜ್ಯೋತಿ ಬೆಳಗಿಸುವರು. ಬಳಿಕ ಪುಷ್ಪಾರ್ಚನೆ, ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ. ಸಭೆಯಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಅಜಿತ್ ಹನುಮಕ್ಕನವರ್ ಮಾತನಾಡುವರು. ಈ ಸಂದರ್ಭದಲ್ಲಿ ಹವಾಲ್ದಾರ್ ಜ್ಯೋನಿ ಮ್ಯಾಥ್ಯೂ ರಾಜಪುರಂ ಇವರನ್ನು ಸನ್ಮಾನಿಸಲಾಗುವುದು. ನಿವೃತ್ತ ಯೋಧ ಬ್ರಿಗೇಡಿಯರ್ ಐ.ಎನ್.ರೈ ಕುಂಬಳೆ, ನಿವೃತ್ತ ಸೇನಾನಿ ನೌಕಾದಳ ಕಮಾಂಡರ್ ಕೆ. ವಿಜಯ ಕುಮಾರ್ ಕಣ್ವತೀರ್ಥ, ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಂಗಳೂರು, ಬೆಂಗಳೂರು ಉದ್ಯಮಿ ಸುರೇಶ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸುವರು. ಮಠದಲ್ಲಿ ನಡೆದ ಸೈನಿಕ ತರಬೇತಿ ಶಿಬಿರದಲ್ಲಿ ಸೈನ್ಯಕ್ಕೆ ಆಯ್ಕೆಯಾದ ಯೋಧರ ಹೆತ್ತವರನ್ನು ಗೌರವಿಸಲಾಗುವುದು.