ಕೊಡಗಿನಲ್ಲಿ ಪತ್ನಿ, ಪುತ್ರಿ ಸಹಿತ ನಾಲ್ವರನ್ನು ಕಡಿದು ಕೊಲೆ: ಆರೋಪಿಯಾದ ವಯನಾಡ್ ನಿವಾಸಿ ಸೆರೆ
ಮಡಿಕೇರಿ: ಇಲ್ಲಿಗೆ ಸಮೀಪದ ಕೊಡಗಿನಲ್ಲಿ ಯುವಕನೋರ್ವ ಪತ್ನಿ ಸಹಿತ ನಾಲ್ಕು ಮಂದಿಯನ್ನು ಕಡಿದು ಕೊಲೆಗೈದ ಭೀಕರ ಘಟನೆ ನಡೆದಿದೆ. ಆರೋಪಿಯಾದ ವಯನಾಡು ನಿವಾಸಿ ಯನ್ನು ಪೊಲೀಸರು ಬಂಧಿಸಿದ್ದಾರೆ. ವಯನಾಡ್ ತಿರುನೆಲ್ಲಿ ನಿವಾಸಿ ಉಣ್ಣಿಕಪರಂಬ್ ನಿವಾಸಿಯಾದ ಗಿರೀಶ್ (೩೮) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆನ್ನಲಾಗಿದೆ. ಈತ ಪತ್ನಿ ನಾಗಿ (30), ಪುತ್ರಿ ಕಾವೇರಿ (5), ನಾಗಿಯ ತಂದೆ ಕರಿಯ (75), ತಾಯಿ ಗೌರಿ (70) ಎಂಬಿವರನ್ನು ಕಡಿದು ಕೊಲೆಗೈದಿರುವುದಾಗಿ ತಿಳಿದು ಬಂದಿದೆ. ಘಟನೆ ಬಳಿಕ ಪರಾರಿಯಾದ ಆರೋಪಿಯನ್ನು ವಯನಾಡ್ ತಲ ಪ್ಪುಳದಿಂದ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಕೊಲತ್ತೋಡ್ ಕಾಫಿ ತೋಟದಲ್ಲಿ ಗಿರೀಶ್ ಹಾಗೂ ಕುಟುಂಬ ಕೆಲಸಕ್ಕಾಗಿ ತಲುಪಿತ್ತು. ಗಿರೀಶ್‌ಗೆ ಬೇರೊಬ್ಬಳು ಮಹಿಳೆ ಯೊಂದಿಗೆ ಸಂಬಂಧವಿತ್ತೆನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಗಿರೀಶ್ ಹಾಗೂ ನಾಗಿ ಮಧ್ಯೆ ನಿರಂತರ ವಾಗ್ವಾದವೂ ನಡೆಯುತ್ತಿತ್ತೆನ್ನಲಾಗಿದೆ. ಗುರುವಾರ ಕೂಡಾ ಇವರ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಗಿರೀಶ್ ತಲವಾರಿನಿಂದ ನಾಗಿಗೆ ಕಡಿ ದಿದ್ದಾನೆನ್ನಲಾಗಿದೆ. ಈ ವೇಳೆ ತಡೆಯಲೆತ್ನಿಸಿದ ಪುತ್ರಿ, ನಾಗಿಯ ತಂದೆ ತಾಯಿಯನ್ನೂ ಕಡಿದು ಆರೋಪಿ ಕೊಲೆಗೈದಿದ್ದಾನೆ. ಇದೇ ವೇಳೆ ನಾಗಿ ಹಾಗೂ ಆಕೆಯ ತಂದೆ ತಾಯಿ ಕೆಲಸಕ್ಕೆ ತಲುಪದ ಹಿನ್ನೆಲೆಯಲ್ಲಿ ಇತರ ಕೆಲಸಗಾರರು ಹುಡುಕಿ ಅವರ ವಾಸಸ್ಥಳಕ್ಕೆ ತಲುಪಿದಾಗ ಅವರು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಅವರು ನೀಡಿದ ದೂರಿನಂತೆ ಕೊಡಗು ಎಸ್‌ಪಿ ರಾಮರಾಜ ಅವರ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿದಾಗ ಗಿರೀಶ್ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿತ್ತು. ಕೂಡಲೇ ಆತನಿಗಾಗಿ ಶೋಧ ನಡೆಸಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.