ಕೊಲೆಗಡುಕ ತಂಡದಲ್ಲಿ ಇನ್ನಷ್ಟು ಮಂದಿ? ಯುವಕನನ್ನು ಕರೆದೊಯ್ದಿರುವುದು ನಂಬ್ರ ಪ್ಲೇಟಿಲ್ಲದ ಬೈಕ್ನಲ್ಲಿ
ಕುಂಬಳೆ: ಕಾಸರಗೋಡು ನಗರದಲ್ಲಿ ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಒಂದನೇ ಆರೋಪಿಯಾದ ಯುವಕನನ್ನು ತಲೆಗೆ ಕಲ್ಲು ಹಾಕಿ ಕೊಂದ ಘಟನೆಯಲ್ಲಿ ಇನ್ನಷ್ಟು ಆರೋಪಿಗಳಿರುವುದಾಗಿ ಸೂಚನೆಯಿದೆ. ಕೃತ್ಯದಲ್ಲಿ ತಾನು ಮಾತ್ರವೇ ಭಾಗಿಯಾಗಿರುವುದಾಗಿ ಸೆರೆಗೀಡಾದ ಆರೋಪಿ ಹೇಳಿಕೆ ನೀಡಿ ದ್ದರೂ ನಾಗರಿಕರು ನೀಡಿದ ಹೇಳಿಕೆ ಪ್ರಕಾರ ಕೊಲೆ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರ ಬಹುದೆಂಬ ಸಂಶಯ ವನ್ನು ತನಿಖಾ ತಂಡ ವ್ಯಕ್ತಪಡಿಸಿದೆ.
ಕಳೆದ ಆದಿತ್ಯವಾರ ರಾತ್ರಿ ಮಾವಿನಕಟ್ಟೆಯ ಕ್ವಾರ್ಟರ್ಸ್ನಲ್ಲಿ ವಾಸಿಸುವ ಕುಂಬಳ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮) ಕೊಲೆಗೀಡಾಗಿದ್ದಾನೆ. ಕುಂಟಂಗೇರಡ್ಕ ಐಎಚ್ಆರ್ಡಿ ಕಾಲೇಜಿನ ಹಿಂಭಾಗದ ಮೈದಾನದಲ್ಲಿ ಕೊಲೆ ನಡೆದಿದೆ. ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದಾಗ ತಾನು ಹಾಗೂ ರಶೀದ್ ಮಧ್ಯೆ ವಾಗ್ವಾದ ನಡೆದಿದ್ದು, ಈಮಧ್ಯೆ ಅಬ್ದುಲ್ ರಶೀದ್ನನ್ನು ದೂಡಿ ಹಾಕಿದ ಬಳಿಕ ತಲೆಗೆ ಕಲ್ಲು ಹಾಕಿ ಕೊಲೆಗೈದಿರುವುದಾಗಿ ಸೆರೆಗೀ ಡಾದ ಈ ಹಿಂದೆ ಪೆರುವಾಡ್ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ (೩೨) ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆದರೆ ಕೊಲೆ ನಡೆದ ದಿನ ರಾತ್ರಿ ಮೈದಾನದಿಂದ ಇಬ್ಬರಿಗಿಂತ ಹೆಚ್ಚು ಮಂದಿಯ ವಾಗ್ವಾದ ಕೇಳಿರುವು ದಾಗಿ ನಾಗರಿಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಕುಂಟಂಗೇರಡ್ಕದಲ್ಲಿ ಕೊಲೆಗೀ ಡಾದ ಅಬ್ದುಲ್ ರಶೀದ್ ಕಾಸರಗೋ ಡಿನಲ್ಲಿ ಶಾನು ಯಾನೆ ಶಾನವಾಸ್ ಎಂಬಾತನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಒಂದನೇ ಆರೋಪಿಯಾ ಗಿದ್ದಾನೆ. ಈಗ ಅಬ್ದುಲ್ ರಶೀದ್ ಕೊಲೆ ಪ್ರಕರಣದಲ್ಲಿ ಸೆರೆಗೀಡಾದ ಅಭಿಲಾಷ್ ಯಾನೆ ಹಬೀಬ್ ಎಂ ಬಾತ ಶಾನುವಿನ ಸ್ನೇಹಿತನಾಗಿದ್ದಾನೆ.
ಶಾನು ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡು ಗಡೆಗೊಂಡ ಅಬ್ದುಲ್ ರಶೀದ್ ಮಾವಿನಕಟ್ಟೆಯ ಕ್ವಾರ್ಟರ್ಸ್ನಲ್ಲಿ ವಾಸಿಸಿ ಸಾರಣೆ ಕೆಲಸ ನಿರ್ವಹಿಸು ತ್ತಿದ್ದಾಗ ಹಬೀಬ್ ಆತನೊಂದಿಗೆ ಸ್ನೇಹ ತೋರಿಸಿ ತಲುಪಿದ್ದಾನೆ. ಅನಂತರ ಅಬ್ದುಲ್ ರಶೀದ್ನ ಕೊಠಡಿಯಲ್ಲೇ ವಾಸವಾಗಿದ್ದನು. ಅಬ್ದುಲ್ ರಶೀದ್ನನ್ನು ಅಪಾಯಕ್ಕೀಡುಮಾಡಲು ಈತ ಉಪಾಯದಿಂದ ಜೊತೆಗೆ ಸೇರಿದ್ದಾ ನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಕೃತ್ಯ ನಡೆದ ದಿನದಂದು ಅಬ್ದುಲ್ ರಶೀದ್ ಹಾಗೂ ಹಬೀಬ್ ಒಂದೇ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರೆಂದು ಕೆಲವರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ಬೈಕ್ನ್ನು ಪತ್ತೆಹಚ್ಚಲಾಗಿದೆ. ಆದರೆ ಅದರ ನಂಬ್ರಪ್ಲೇಟ್ ಕಳಚಿ ತೆಗೆದ ಸ್ಥಿತಿಯಲ್ಲಿದೆ.