ಕೊಲೆಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ಮುಖಂಡನಿಗೆ ಫೋಕ್ಲೋರ್ ಅಕಾಡೆಮಿ ಉಪಾಧ್ಯಕ್ಷ ಪದವಿ: ಕಾಂಗ್ರೆಸ್ ಖಂಡನೆ
ಕಾಸರಗೋಡು: ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ಮುಖಂಡನನ್ನು ಫೋಕ್ಲೋರ್ ಅಕಾಡೆಮಿ ಉಪಾಧ್ಯಕ್ಷನನ್ನಾಗಿ ಸರಕಾರ ನೇಮಕಗೊಳಿಸಿರುವುದು ಕಾನೂನಿನೊಂದಿಗಿರುವ ಸವಾಲು ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಆರೋಪಿಸಿದ್ದಾರೆ. ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್, ಕೃಪೇಶ್‌ರ ಕೊಲೆ ಕೃತ್ಯದಲ್ಲಿ ಶಿಕ್ಷೆಗೊಳಗಾದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್‌ರನ್ನು ಅಕಾಡೆಮಿಯ ಉಪಾಧ್ಯಕ್ಷರನ್ನಾಗಿ ಸರಕಾರ ನೇಮಕಗೊಳಿಸಿರುವ ಕ್ರಮ ನ್ಯಾಯಾಲಯದೊಂದಿಗಿರುವ ಸವಾಲು ಎಂದು ಡಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ. ಕೊಲೆ ಕೃತ್ಯಗಳಿಗೆ ಪ್ರೋತ್ಸಾಹ ನೀಡುವ, ಸಂರಕ್ಷಣೆ ನೀಡುವ ಕ್ರಮವನ್ನು ಎಡರಂಗ ಸರಕಾರ ನಡೆಸುತ್ತಿದೆ ಎಂದೂ, ಇದು ಪ್ರತಿಭಟ ನಾರ್ಹವೆಂದು ಅವರು ನುಡಿದರು.