ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಂದ ಪ್ರಕರಣ: ಮಾವಿನಕಟ್ಟೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸ್ನೇಹಿತ ಕಸ್ಟಡಿಗೆ
ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಲೆಗೈದ ಪ್ರಕರಣದ ಆರೋಪಿ ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಇಂದು ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಮರಣೋತ್ತರ ಪರೀಕ್ಷೆ ಬಳಿಕ ಆರೋ ಪಿಯ ಅಧಿಕೃತ ಬಂಧನ ದಾಖಲಿಸ ಲಾಗುವುದು. ಈ ಹಿಂದೆ ಪೆರುವಾ ಡ್‌ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ ಯಾನೆ ಬಹಬಿ (೩೨) ಎಂಬಾತನನ್ನು ಕುಂಬಳೆ ಪೊ ಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತನಿಖೆ ವೇಳೆ ಈತ ತಪ್ಪೊಪ್ಪಿಕೊಂ ಡಿದ್ದಾನೆಂದು ಸೂಚನೆಯಿದೆ.
ಮೊನ್ನೆ ರಾತ್ರಿ ೧೧.೩೦ರ ವೇಳೆ ಕಾಸರಗೋಡಿನ ಶಾನು ಯಾನೆ ಶೈನ್ ಯಾನೆ ಶಾನವಾಸ್ ಕೊಲೆ ಪ್ರಕರಣದ ಒಂದನೇ ಆರೋಪಿಯಾದ ಕುಂಬಳೆ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮)ನನ್ನು ಪೈಶಾಚಿಕವಾಗಿ ಕೊಲೆಗೈಯ್ಯಲಾಗಿದೆ. ತಲೆಗೆ ಕಗ್ಗಲ್ಲು ಹಾಕಿ ಕೊಲೆಗೈದ ಸ್ಥಿತಿಯಲ್ಲಿ ನಿನ್ನೆ ಬೆಳಿಗ್ಗೆ ಕುಂಟಂಗೇರಡ್ಕ ಐಎಚ್‌ಆರ್‌ಡಿ ಕಾಲೇಜು ಸಮೀಪದ ಮೈದಾನ ಬಳಿಯ ಪೊದೆಗಳೆಡೆಯಲ್ಲಿ ರಶೀದ್‌ನ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆಕೃತ್ಯವೆಂದು ಖಚಿತಪಡಿಸಿದ ಪೊಲೀಸರು ಉಪಾಯದಿಂದ ಹಬೀಬ್ ನನ್ನು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಹಲವು ಪ್ರಕರಣದಲ್ಲಿ ಆರೋಪಿಯಾದ ಹಬೀಬ್ ಕೆಲವು ವಾರಗಳಿಂದ ಕುಂಬಳೆ ಮಾವಿನಕಟ್ಟೆ ಯಲ್ಲಿ ಸಮೂಸ ರಶೀದ್‌ನ ಕೊಠಡಿಯಲ್ಲಿ ವಾಸಿಸುತ್ತಿದ್ದನು. ಶಾನು ಕೊಲೆ ಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ರಶೀದ್ ಸಾರಣೆ ಕೆಲಸಕ್ಕೆ ತೆರಳುತ್ತಿದ್ದನು. ಈಮಧ್ಯೆ ಹಬೀಬ್ ಮತ್ತೆ ಗೆಳೆತನ ಮಾಡಿ ಜೊತೆಗೆ ವಾಸಿಸುತ್ತಿದ್ದನೆಂದು ತನಿಖಾ ಮೂಲಗಳು ತಿಳಿಸಿವೆ. ಜತೆಯಾಗಿ ವಾಸ ಆರಂಭಿಸು ವುದರೊಂದಿಗೆ ರಶೀದ್ ಹಳೆ ಜೀವನ ರೀತಿಗೆ ಮರಳಿದ್ದನು. ಈ ಇಬ್ಬರು ಬಹು ತೇಕ ದಿನಗಳಲ್ಲಿ ಕುಂಟಂಗೇರಡ್ಕ ಮೈದಾನ ಸಮೀಪಕ್ಕೆ ತಲುಪಿ ಮದ್ಯ, ಗಾಂಜಾ ಸೇವಿಸಲು ಆರಂಭಿಸಿರುವುದಾಗಿ ಹೇಳಲಾ ಗುತ್ತಿದೆ. ಈ ಮಧ್ಯೆ ಹಲವು ಬಾರಿ ಕ್ಷುಲ್ಲಕ ವಿಷಯಗಳ ಹೆಸರಲ್ಲಿ ಈ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರೂ ಬಳಿಕ ಅವರು ಸ್ನೇಹದಿಂದಲೇ ನಡೆದುಕೊಳ್ಳುತ್ತಿದ್ದರು. ಮೊನ್ನೆ ರಾತ್ರಿಯೂ ಈ ಇಬ್ಬರು ಕುಂಟಂಗೇರಡ್ಕ ಬಳಿಕೆ ತಲುಪಿ ಮಾದಕ ವಸ್ತು ಸೇವಿಸಿದ್ದರು. ಈ ಮಧ್ಯೆ ಅವರೊ ಳಗೆ ವಾಗ್ವಾದ ಉಂಟಾಗಿದ್ದು, ಬಳಿಕ ರಶೀದ್‌ನನ್ನು ದೂಡಿಹಾಕಲಾಗಿದೆ. ಒಂದು ಕಗ್ಗಲ್ಲಿನ ಮೇಲೆ ಬಿದ್ದ ರಶೀದ್‌ನ ತಲೆಗೆ ಗಂಭೀರ ಗಾಯವಾಗಿತ್ತು. ಅನಂತರ ಅದೇ ಕಲ್ಲನ್ನು ತೆಗೆದು ರಶೀದ್‌ನ ತಲೆಗೆ ಹಾಕಿ ಕೊಲೆಗೈದಿದ್ದಾನೆ. ಸಾವು ದೃಢೀಕರಿಸಿದ ಬಳಿಕ ಕಾಲನ್ನು ಹಿಡಿದು ಎಳೆದುಕೊಂಡೊಯ್ದು ಪೊದೆಗಳೆಡೆ ಮೃತದೇಹವನ್ನು ಎಸೆಯಲಾಗಿದೆ. ಆದರೆ ಕಸ್ಟಡಿಯಲ್ಲಿ ಇರುವ ಹಬೀಬ್ ನೀಡಿದ ಹೇಳಿಕೆಯನ್ನು ಅಂತಿಮವಾಗಿ ನಂಬಬೇಕಾದರೆ ಮರಣೋತ್ತರ ಪರೀಕ್ಷಾ ವರದಿ ಲಭಿಸಬೇಕಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.