ಕೊಲೆ ಪ್ರಕರಣದ ಆರೋಪಿಯನ್ನು ಕೊಲೆಗೈದ ಪ್ರಕರಣದ ತೀರ್ಪು ದ.11ರಂದು
ಕಾಸರಗೋಡು: ಕೊಲೆ ಪ್ರಕರಣದ ಆರೋಪಿಯನ್ನು ಕೊಲೆಗೈದ ಪ್ರಕರಣದ ತೀರ್ಪನ್ನು ವಿಚಾರಣಾ ನ್ಯಾಯಾಲಯ ವಾದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಡಿಸೆಂಬರ್ 11ರಂದು ನೀಡಲಿದೆ. ಕುಂ ಬಳೆ ಬದ್ರಿಯಾ ನಗರದ ಮಾಂuಟಿಜeಜಿiಟಿeಜ ಮುಡಿ ಸಿದ್ದೀಕ್ (46), ಉಮ್ಮರ್ ಫಾರೂಕ್ (36), ಪೆರುವಾಡಿನ ಸಹೀರ್ (36), ಪೆರೋಳ್ನ ನಿಯಾಸ್ (38), ಆರಿಕ್ಕಾಡಿ ಬಂಬ್ರಾ ಣದ ಹ್ಯಾರಿಸ್ (36) ಮತ್ತು ಪೆರುವಾಡು ಕೋಟೆಯ ಲತೀಫ್ (43) ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.
ಮೊಗ್ರಾಲ್ ಪೆರಾಲ್ ಪೊಟ್ಟೋ ಡಿಮೂಲೆ ವೀಟಿಲ್ನ ಮುಹಮ್ಮದ್ ಕುಂuಟಿಜeಜಿiಟಿeಜ ಹಾಜಿಯವರ ಮಗ ಅಬ್ದುಲ್ ಸಲಾಂ (22)ನನ್ನು ಕೊಲೆಗೈದ ಪ್ರಕರಣವಾಗಿದೆ ಇದು. 2017 ಎಪ್ರಿಲ್ 30ರಂದು ಅಬ್ದುಲ್ ಸಲಾಂ ನನ್ನು ಮೊಗ್ರಾಲ್ ಮಾಳಿಯಂಗರ ಕೋ ಟಾದಲ್ಲಿ ಕುತ್ತಿಗೆ ಕಡಿದು ಕೊಲೆಗೈಯ್ಯ ಲಾಗಿತ್ತು. ಆ ವೇಳೆ ಆತನ ಜತೆಗಿದ್ದ ಸ್ನೇಹಿತ ನೌಶಾದ್ (28)ನಿಗೂ ಅಕ್ರಮಿಗಳು ಇರಿದು ಗಂಭೀರ ಗಾಯಗೊಳಿಸಿದ್ದರು.
ಕೊಲೆಗೈಯ್ಯಲ್ಪಟ್ಟ ಅಬ್ದುಲ್ ಸಲಾಂ ಕುಂಬಳೆ ಮತ್ತು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದಾಖಲು ಗೊಂಡಿರುವ ಹಲವು ಪ್ರಕರಣಗಳಲ್ಲಿ ಆರೋಪಿಯೂ ಆಗಿದ್ದನು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಕುಂಬಳೆ ಪೇರಾಲ್ ಪೊಟ್ಟೇರಿಯ ಬಿ.ಎ. ಮುಹಮ್ಮದ್ರ ಮಗ ಪೊಟ್ಟೋರಿಯ ಶರೀಫ್ನನ್ನು ಕೊಲೆಗೈದ ಪ್ರಕರಣದಲ್ಲೂ ಅಬ್ದುಲ್ ಸಲಾಂ ಆರೋಪಿಯಾಗಿದ್ದನು.