ಕೊಲೆ ಸಹಿತ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿಯಾದಾತ ಕಾಪಾ ಪ್ರಕಾರ ಬಂಧನ
ಕುಂಬಳೆ: ಕೊಲೆ, ಕೊಲೆಯತ್ನ ಸಹಿತ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿಯಾದಾತನ ಮೇಲೆ ಕಾಪಾ ಕಾಯ್ದೆ ಪ್ರಕಾರ ಕೇಸು ದಾಖ ಲಿಸಿ ಆತನನ್ನು ಬಂಧಿಸಲಾಗಿದೆ.
ಚೌಕಿ ಕಲ್ಲಂಗೈ ನಿವಾಸಿಯೂ ಪ್ರಸ್ತುತ ಕುಂಬಳೆ ಮಾವಿನಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅಭಿಲಾಷ್ ಯಾನೆ ಹಬೀಬ್ (30) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಬಂಧಿಸಿ ದ್ದಾರೆ. ಬಳಿಕ ಆರೋಪಿಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಕುಂಬಳೆ ಶಾಂತಿಪಳ್ಳ ಐಎಚ್‌ಆರ್‌ಡಿ ಕಾಲೇಜಿನ ಸಮೀಪ ಮೂಸ ರಶೀದ್ ಯಾನೆ ಅಬ್ದುಲ್ ರಶೀದ್ ಎಂಬವರನ್ನು ತಲೆಗೆ ಕಗ್ಗಲ್ಲು ಹಾಕಿ ಕೊಲೆಗೈದ ಪ್ರಕರಣದಲ್ಲಿ ಅಭಿಲಾಶ್ ಯಾನೆ ಹಬೀಬ್ ಆರೋಪಿಯಾಗಿದ್ದಾನೆ.
ಮೊಗ್ರಾಲ್ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣ ಕೂಡಾ ಈತನ ಮೇಲೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾತ್ರವಲ್ಲದೆ ಓರ್ವೆ ಮಹಿಳೆಯೊಂದಿಗೆ ಸೇರಿಕೊಂಡು ಯುವಕನೋರ್ವನ ನಗ್ನ ಫೋಟೋ ತೆಗೆದು ಆತನಿಗೆ ಬೆದರಿಕೆಯೊಡ್ಡಿ ೧೫ ಲಕ್ಷ ರೂಪಾಯಿ ಬೇಡಿಕೆಯೊಡ್ಡಿದ್ದು, ಬಳಿಕ 5 ಲಕ್ಷ ರೂಪಾಯಿಗಳನ್ನು ಯುವಕನಿಂದ ಅಪಹರಿಸಿದ ಬಗ್ಗೆ ಬೇಡಗಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಬಗ್ಗೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಹಬೀಬ್‌ನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಆರೋಪಿಯೋ ರ್ವನಿಗೆ ಗಾಂಜಾ ಸಾಗಾಟ ನಡೆಸಿದ ಆರೋಪದಂತೆ ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ, 2 ಕಿಲೋ ಗಾಂಜಾ ಹಾಗೂ ಎಂಡಿಎಂಎ ಸಾಗಿಸಿದ ಆರೋಪದಂತೆ ನೀಲೇಶ್ವರ ಪೊಲೀಸ್ ಠಾಣೆಯಲ್ಲೂ ಹಬೀಬ್‌ನ ವಿರುದ್ಧ ಕೇಸುಗಳಿವೆ. ಹೀಗೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಈತನ ಮೇಲೆ ಈ ಹಿಂದೆ ಕಾಪಾ ಪ್ರಕಾರ ಕೇಸುದಾಖಲಿಸಿ ಬಂಧಿಸಿ ೬ ತಿಂಗಳು ಜೈಲಿನಲ್ಲಿರಿಸಲಾಗಿತ್ತು. ಅನಂತರ ಬಿಡುಗಡೆಗೊಂಡು ಬಂದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷ ಕಾಲಕ್ಕೆ ಕಾಪಾ ಪ್ರಕಾರ ಬಂಧಿಸಿ ರಿಮಾಂಡ್‌ನಲ್ಲಿರಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.