ಕೊಲ್ಲಿಯ ಹೋಟೆಲ್‌ಗಳಲ್ಲಿ ಉದ್ಯೋಗ ಆಮಿಷವೊಡ್ಡಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ ಓರ್ವ ಸೆರೆ
ಚೆನ್ನೈ: ವಿದೇಶದ ಖ್ಯಾತ ಹೋಟೆಲ್‌ಗಳಲ್ಲಿ ಉದ್ಯೋಗ ಆಮಿಷ ನೀಡಿ ಲೈಂಗಿಕ ಚಟುವಟಿಕೆಗಳಿಗೆ ಬಳಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ದುಬಾಯಲ್ಲಿ ದಿಲ್‌ರುಬಾ ಎಂಬ ಹೆಸರಲ್ಲಿ ಕ್ಲಬ್ ನಡೆಸುತ್ತಿದ್ದ ಮಲಪ್ಪುರಂ ನಿವಾಸಿ ಮುಸ್ತಫ ಪುತ್ತನ್ ಕೋಟ (56)ನನ್ನು ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಬಂಧಿಸಿ ಚೆನ್ನೈಗೆ ಕೊಂಡುಹೋಗ ಲಾಗಿದೆ. ಸಿನಿಮಾ, ಸೀರಿಯಲ್ ನಟಿಯರೂ ಸೇರಿದಂತೆ 50ರಷ್ಟು ತಮಿಳು ಯುವತಿಯರನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿರುವುದಾಗಿ ಈತನ ವಿರುದ್ಧ ಕೇಸು ದಾಖಲಾಗಿ ಈಗ ಸೆರೆ ಹಿಡಿಯಲಾಗಿದೆ. ಚೆನ್ನೈ ಪೊಲೀಸ್ ಕಮಿಷನರ್ ಎ. ಅರುಣ್‌ರ ಆದೇಶದಂತೆ ಈತನನ್ನು ಗೂಂಡಾ ಕಾಯ್ದೆ ಹೊರಿಸಿ ಜೈಲಿಗಟ್ಟಲಾಗಿದೆ. ದುಬಾಯಿಂದ ಪಾರಾಗಿ ಚೆನ್ನೈಗೆ ತಲುಪಿದ ಯುವತಿ ನೀಡಿದ ದೂರಿನಂತೆ ತಮಿಳುನಾಡು ಪೊಲೀಸರು ನಡೆಸಿದ ತನಿಖೆಯಲ್ಲಿ ಲೈಂಗಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿದೆ. ದುಬಾಗೆ ತಲುಪುವವರಿಗೆ ಪಂಚ ನಕ್ಷತ್ರ ಹೋಟೆಲ್‌ಗಳ ಕ್ಲಬ್‌ಗಳಲ್ಲಿ ಅನೈತಿಕ ನೃತ್ಯ ಮಾಡುವ ಕೆಲಸ ಲಭಿಸುವುದು. ಕೆಲವರನ್ನು ಲೈಂಗಿಕ ಕೆಲಸಗಳಿಗೂ ಉಪಯೋಗಿಸಲಾ ಗುತ್ತಿದೆ. ನೃತ್ಯಕ್ಕೆಂದು ತಿಳಿಸಿ ಹೋದವರು ಸಿನಿಮಾಗಳ ಜ್ಯೂನಿಯರ್ ನಟಿಗಳೆಂದು ಕರೆಸಿಕೊಂಡಿದ್ದ ಟೆಲಿವಿಷನ್ ತಾರೆಗಳು ಕೂಡಾ ಈ ದಂಧೆಗೆ ಬಲಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.