ಕೊಳಚಪ್ಪು ಶ್ರೀ ಶಾಸ್ತಾವೇಶ್ವರ ಭಜನಾ ಸಂಘ ವಾರ್ಷಿಕೋತ್ಸವ ೧೪ರಂದು

ಪೈವಳಿಕೆ: ಕೊಳಚಪುö್ಪ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಏಕಾದಶ ರುದ್ರಾಭಿಷೇಕ, ರಂಗಪೂಜೆ ಇತ್ತೀಚೆಗೆ ನಡೆಯಿತು. ಶಾಸ್ತಾವೇಶ್ವರ ಭಜನಾ ಸಂಘದ 27ನೇ ವಾರ್ಷಿಕೋತ್ಸವ ಈ ತಿಂಗಳ 14ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 6ರಿಂದ ಗಣಪತಿ ಹೋಮ, ಬೆಳಿಗ್ಗೆ 6.58ರಿಂದ ಏಕಾಹ ಭಜನೆ ಆರಂಭಗೊAಡು ಮರುದಿನ ಸೂರ್ಯೋದಯದ ತನಕ ನಡೆಯಲಿದೆ. ಬೆಳಿಗ್ಗೆ 8ರಿಂದ ಕ್ಷೇತ್ರದ ದೈವಗಳಿಗೆ ತಂಬಿಲ, 9ರಿಂದ ರುದ್ರಾಭಿಷೇಕ, 10ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ ಕಾರ್ತಿಕಪೂಜೆ, ಅನ್ನಸಂತರ್ಪಣೆ, ನಡೆಯಲಿದೆ.

You cannot copy contents of this page