ಕೊಳದಲ್ಲಿ ಸ್ನಾನ ಮಾಡಿದ ಪ್ಲಸ್ಟು ವಿದ್ಯಾರ್ಥಿಗೆ ಅಮೀಬಿಕ್ ಮೆದುಳು ಜ್ವರ: ಇತರ ಇಬ್ಬರು ಗೆಳೆಯರು ನಿಗಾದಲ್ಲಿ
ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಅಮೀಬಿಕ್ ಮೆದುಳು ಜ್ವರ ಖಚಿತಪಡಿಸಲಾಗಿದೆ. ನಾವಾಯಿಕುಳಂ ನಿವಾಸಿಯಾದ ಪ್ಲಸ್ಟು ವಿದ್ಯಾರ್ಥಿಯನ್ನು ರೋಗ ಬಾಧೆ ಹಿನ್ನೆಲೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಓಣಂ ದಿನದಂದು ಕೊಳದಲ್ಲಿ ಈತ ಸ್ನಾನ ಮಾಡಿದ್ದನೆನ್ನಲಾಗಿದೆ. ಅದರ ಬಳಿಕ ರೋಗ ಲಕ್ಷಣಗಳು ಕಂಡು ಬಂದಿದ್ದು, ಈತನ ಜೊತೆಯಲ್ಲಿಯೇ ಸ್ನಾನ ಮಾಡಿದ ಇತರ ಇಬ್ಬರ ಬಗ್ಗೆ ನಿಗಾ ಇರಿಸಲಾಗಿದೆ. ಸೆಪ್ಟಂಬರ್ನ ಮೊದಲ ವಾರದಲ್ಲಿ ತಿರುವನಂತಪುರದಲ್ಲಿ ಅಮೀಬಿಕ್ ಮೆದುಳು ಜ್ವರ ತಗಲಿ ಓರ್ವ ಮೃತಪಟ್ಟಿದ್ದರು. ಇದೇ ರೋಗ ಲಕ್ಷಣಗಳೊಂದಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ ಹತ್ತು ಮಂದಿ ರೋಗದಿಂದ ಗುಣಮುಖರಾಗಿದ್ದರು.
ಕಟ್ಟಿ ನಿಲ್ಲುವ ಅಥವಾ ಹರಿಯುತ್ತಿರುವ ಜಲಮೂಲಗಳಿಂದ ಶರೀರಕ್ಕೆ ಪ್ರವೇಶಿಸುವ ಬ್ಯಾಕ್ಟೀರಿಯಗಳು ರೋಗಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ನಾನ ಮಾಡುವಾಗ ಮೂಗಿನ ಮೂಲಕ ಅಥವಾ ಚರ್ಮದ ಮೂಲಕ ಶರೀರಕ್ಕೆ ರೋಗಾಣು ಪ್ರವೇಶಿಸುತ್ತದೆ.