ಕೋಟ್ಯಂತರ ರೂ.ಗಳ ಎಂಡಿಎಂಎ ವಶ: ಮುಖ್ಯ ಆರೋಪಿಗಾಗಿ ಲುಕೌಟ್ ನೋಟೀಸು
ಕಲ್ಲಿಕೋಟೆ: ಕರಿಪ್ಪೂರ್‌ನಲ್ಲಿ ಒಂದು ಕಿಲೋ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸು ಹೊರಡಿಸಿದ್ದಾರೆ. ಕಣ್ಣೂರು ನಿವಾಸಿ ಯೂ ಒಮಾನ್‌ನಲ್ಲಿ ಉದ್ಯೋಗz ಲ್ಲಿರುವ ನೌಫಲ್ ಎಂಬಾತನ ಪತ್ತೆಗಾಗಿ ಲುಕೌಟ್ ನೋಟೀಸು ಹೊರಡಿಸಲಾಗಿದೆ. ವಿದೇಶದಿಂದ ಇತ್ತೀಚೆಗೆ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಿದ ಪತ್ತನಂತಿಟ್ಟ ನಿವಾಸಿ ಸೂರ್ಯ ಹಾಗೂ ಎಂಡಿಎಂಎ ಪಡೆದುಕೊಳ್ಳಲು ತಲುಪಿದ ಮಲಪ್ಪುರಂ ತಿರೂರಂಗಾಡಿಯ ಅಲಿ ಅಕ್ಬರ್, ಮುಹಮ್ಮದ್ ರಾಫಿ, ಸಿ.ಪಿ. ಬಷೀರ್ ಎಂಬಿವರನ್ನು ಸೆರೆಹಿಡಿ ಯಲಾಗಿತ್ತು. ಇವರ ಕೈಯಿಂದ ಕೋಟ್ಯಂತರ ರೂಪಾಯಿಗಳ ಎಂಡಿಎಂಎ ವಶಪಡಿಸಲಾಗಿತ್ತು. ಸೂರ್ಯಳಿಗೆ ವಿಸಿಟಿಂಗ್ ವಿಸಾ ಹಾಗೂ ಹಣ ನೀಡಿ ಒಮಾನ್‌ಗೆ ಕಳುಹಿ ಸಿರುವುದು ನೌಫಲ್ ಆಗಿದ್ದಾನೆಂದು ಡಾನ್ಸಾಫ್ ಸ್ಕ್ವಾಡ್ ಪತ್ತೆಹಚ್ಚಿದೆ. ಆರೋಪಿಗಳು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಆರೋಪಿಗಳ ಫೋನ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.