ಕೋಳಿ ಸಾಕಣೆ ಕೇಂದ್ರಕ್ಕೆ ದಾಳಿ ನಡೆಸಿದ ಬೀದಿ ನಾಯಿಗಳು: 50ರಷ್ಟು ಕೋಳಿಗಳು ಸಾವು

ಕಾಸರಗೋಡು: ಕೋಳಿ ಸಾಕಣೆ ಕೇಂದ್ರಕ್ಕೆ ನುಗ್ಗಿದ ಬೀದಿ ನಾಯಿಗಳು 50ರಷ್ಟು ಕೋಳಿಗಳನ್ನು ಕೊಂದು ಹಾಕಿದ ಘಟನೆ ನಡೆದಿದೆ.

ಮಧೂರು ಪಟ್ಲ ಬಳಿಯ ಚನ್ನಿಕುಡೇಲ್ ಎಂಬಲ್ಲಿ  ಬೀದಿ ನಾಯಿಗಳ ಉಪಟಳಕ್ಕೆ ಕೋಳಿಗಳು ಬಲಿಯಾಗಿವೆ. ಇಂದು ಮುಂಜಾನೆ 5.30ರ ವೇಳೆ ಕೋಳಿಗಳು ಜೋರಾಗಿ ಕೂಗುವುದನ್ನು ಕೇಳಿದ ಸ್ಥಳೀಯರು ಅಲ್ಲಿಗೆ ತೆರಳಿ ನೋಡಿದಾಗ ನಾಲ್ಕು ಬೀದಿ ನಾಯಿಗಳು ಕಟ್ಟಡದೊಳ ಗಿನಿಂದ ಓಡಿ ಹೋಗುವುದು ಕಾಣಿಸಿದೆ. ಬಳಿಕ ಕಟ್ಟಡದೊಳಗೆ ಪ್ರವೇಶಿಸಿ ನೋಡಿದಾಗ  50ರಷ್ಟು ಕೋಳಿಗಳು ಸಾವಿಗೀಡಾಗಿ ಬಿದ್ದಿರುವುದು ಕಂಡುಬಂದಿದೆ.

ಕಲ್ಲಕಟ್ಟ ನಿವಾಸಿಯಾದ ಸಫ್ವಾನ್ ಎಂಬವರು ಚನ್ನಿಕುಡೇಲ್‌ನಲ್ಲಿ ಸ್ಥಳ ಖರೀದಿಸಿ ಅಲ್ಲಿ ಕೋಳಿ ಸಾಕಣೆ ಕೇಂದ್ರ ಆರಂಭಿಸಿದ್ದರು. ಇಂದು ಬೆಳಿಗ್ಗೆ ಅವರು ತಲುಪಿ ನೋಡಿದಾಗಲೇ ತಾನು ಕಷ್ಟಪಟ್ಟು ಸಾವಿರಾರು ರೂಪಾಯಿ ವ್ಯಯಿಸಿ ಬೆಳೆಸಿದ ಕೋಳಿಗಳು ಬೀದಿ ನಾಯಿಗಳ ದಾಳಿಗೆ ಬಲಿಯಾದುದು ಕಂಡುಬಂದಿದೆ. ಇದರಿಂದ ಸುಮಾರು 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ನಷ್ಟ ಸಂಭವಿಸಿಯೆಂದು ಅಂದಾಜಿಸಲಾಗಿದೆ.

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂ ಡಿದ್ದು ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

RELATED NEWS

You cannot copy contents of this page