ಕೋಹಿನೂರ್ ಬಸ್ ನೌಕರ ನಿಧನ
ಬದಿಯಡ್ಕ: ಮಾರ್ಪನಡ್ಕ ಬಳಿಯ ಪದ್ಮಾರು ನಿವಾಸಿಯೂ ಕೋಹಿನೂರ್ ಬಸ್ ನೌಕರನಾದ ಕುಂಞಿರಾಮ ಯಾನೆ ನಾರಾಯಣ ಮಣಿಯಾಣಿ (55) ನಿಧನಹೊಂದಿ ದರು. ನಿನ್ನೆ ಸಂಜೆ ಅಸೌಖ್ಯ ಕಾಣಿಸಿ ಕೊಂಡ ಇವರನ್ನು ಕೂಡಲೇ ಮುಳ್ಳೇ ರಿಯಾದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಊರಿನಲ್ಲಿ ಸಾಮಾಜಿಕ ಚಟುವಟಿP ಗಳಲ್ಲೂ ಇವರು ಸಕ್ರಿಯರಾಗಿದ್ದರು.
ದಿವಂಗತರಾದ ಕೃಷ್ಣ ಮಣಿಯಾಣಿ-ಸೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಶ್ರೀಜ, ಅಕ್ಷತ, ಅಶ್ವತಿ, ಮನೋಹರ ಯಾನೆ ವಿನು (ವಂದೇ ಭಾರತ್ ರೈಲ್ವೇ ಉದ್ಯೋಗಿ), ಸಹೋದರ-ಸಹೋದರಿಯರಾದ ಜನಾರ್ದನ, ಪ್ರೇಮ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.