ಕೌನ್ಸಿಲಿಂಗ್‌ಗೆ ತಲುಪಿದ ಬಾಲಕಿ ಮೇಲೆ ದೌರ್ಜನ್ಯ: ಬಿಗಿದಪ್ಪಿ ಮುತ್ತು ಕೊಟ್ಟ ವೈದ್ಯನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿನಿಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಆಕೆ ಮೇಲೆ ದೌರ್ಜನ್ಯಕ್ಕೆತ್ನಿಸಿದ ವೈದ್ಯನ ವಿರುದ್ಧ ಚಂದೇರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.

ಕಾಞಂಗಾಡ್ ಸಮೀಪದ ಓರ್ವ ವೈದ್ಯನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2023 ಸೆಪ್ಟಂಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕಲಿಯಲು ಮುಂದಿದ್ದ ವಿದ್ಯಾರ್ಥಿನಿ ಬಳಿಕ ಉದಾಸೀನ ನಿಲುವು ಹೊಂದಿದ್ದಳೆನ್ನಲಾಗಿದೆ. ಅಧ್ಯಾಪಿಕೆಯರು ವಿಚಾರಿಸಿದರೂ ಬಾಲಕಿಯಿಂದ ಯಾವುದೇ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ ಬಾಲಕಿಯನ್ನು ವೈದ್ಯನ ಮನೆಯಲ್ಲಿ ನಡೆಯುವ ಕೌನ್ಸಿಲಿಂಗ್ ಕೇಂದ್ರಕ್ಕೆ ತಲುಪಿಸಲಾಗಿತ್ತು. ಕೌನ್ಸಿಲಿಂಗ್ ನಡೆಸುತ್ತಿದ್ದಾಗ ವೈದ್ಯ ಬಾಲಕಿಯನ್ನು ಬಿಗಿದಪ್ಪಿ  ಚುಂಬಿಸಿದ್ದನೆನ್ನಲಾಗಿದೆ. ಆದರೆ ಭಯಗೊಂಡ ಬಾಲಕಿ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ಇದೀಗ ಪ್ಲಸ್‌ಟುನಲ್ಲಿ ಕಲಿಯುತ್ತಿರುವ ಬಾಲಕಿಯನ್ನು ಮತ್ತೊಮ್ಮೆ ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಎರಡು ವರ್ಷಗಳ ಹಿಂದೆ ನಡೆದ ಘಟನೆ ಬಹಿರಂಗಗೊಂಡಿದೆ.

ಚಂದೇರ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಹೊಸದುರ್ಗ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

You cannot copy contents of this page