ಕೌನ್ಸಿಲಿಂಗ್‌ಗೆ ತಲುಪಿದ ಬಾಲಕಿಗೆ ಕಿರುಕುಳ : ವೈದ್ಯ ಪೋಕ್ಸೋ ಪ್ರಕಾರ ಬಂಧನ

ಕಾಸರಗೋಡು: ಕೌನ್ಸಿಲಿಂಗ್‌ಗೆ ಬಂದ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ವೈದ್ಯನನ್ನು ಬಂಧಿಸಲಾಗಿದೆ.  ಕಾಞಂಗಾಡ್ ಕುಶಾಲ್‌ನಗರ ರೈಲ್ವೇ ಗೇಟ್ ಬಳಿಯ ಡಾ| ವಿಶಾಖ್ ಕುಮಾರ್‌ನನ್ನು  ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ತಪಾಸಣೆ ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.

2023 ಸೆಪ್ಟಂಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಶಿಕ್ಷಣದಲ್ಲಿ ಹಿಂದುಳಿದ ಹಿನ್ನೆಲೆಯಲ್ಲಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಕೌನ್ಸಿ ಲಿಂಗ್‌ಗಾಗಿ ವೈದ್ಯನ ಕ್ಲಿನಿಕ್‌ಗೆ ತಲುಪಿಸಲಾಗಿತ್ತು. ಈ ವೇಳೆ ವೈದ್ಯ ಬಾಲಕಿಗೆ ಕಿರುಕುಳ ನೀಡಿದ್ದಾ ನೆನ್ನಲಾಗಿದೆ. ಆದರೆ ಭಯದಿಂದ ಬಾಲಕಿ ವಿಷಯವನ್ನು ಬಹಿ ರಂಗಪಡಿಸಿರಲಿಲ್ಲ. ಪ್ರಸ್ತುತ ಪ್ಲಸ್‌ಟುನಲ್ಲಿ ಕಲಿಯುತ್ತಿರುವ ಬಾಲಕಿಯನ್ನು ಇದೀಗ ಮತ್ತೊಮ್ಮೆ ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಎರಡು ವರ್ಷಗಳ ಹಿಂದೆ ನಡೆದ ಕಿರುಕುಳ ಬಗ್ಗೆ ತಿಳಿಸಿದ್ದಾಳೆ. ಇದರಂತೆ  ವೈದ್ಯನ ವಿರುದ್ಧ ಹೊಸದುರ್ಗ ಪೊಲೀಸರು ಕೆಲವು ದಿನಗಳ ಹಿಂದೆ ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದರು. ಈ ವೇಳೆ ಚೆನ್ನೈಯಲ್ಲಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ವೈದ್ಯ ಸೋಮವಾರ ಸಂಜೆ ಕಾಞಂಗಾಡ್‌ಗೆ ಮರಳಿ ತಲುಪಿದ್ದನು. ಆರೋಪಿ ಮನೆಗೆ ತಲುಪಿದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.

RELATED NEWS

You cannot copy contents of this page