ಕ್ಯಾನ್ಸರ್ ರೋಗಿಯಾದ ತಾಯಿಯನ್ನು ಕೊಲ್ಲಲು ಯತ್ನ: ಪುತ್ರ ಕಸ್ಟಡಿಯಲ್ಲಿ
ಕಣ್ಣೂರು: ಕ್ಯಾನ್ಸರ್ ರೋಗಿ ಯಾದ ತಾಯಿಯನ್ನು ಕುತ್ತಿಗೆ ಹಿಚುಕಿ, ಮುಖಕ್ಕೆ ತಲೆದಿಂಬು ಇಟ್ಟು ಒತ್ತಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಅಸ್ವಸ್ಥರಾದ ಚೆರುಪುಳ ಭೂದಾನ ನಿವಾಸಿ ನಾರಾಯಣಿ ಅಮ್ಮರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪುತ್ರ ಸತೀಶ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಇಂದು ಮುಂಜಾನೆ ಘಟನೆ ನಡೆದಿದೆ.
ನಾರಾಯಣಿ ಅಮ್ಮ ಕ್ಯಾನ್ಸರ್ ರೋಗಿಯಾಗಿದ್ದು, ಪುತ್ರ ಸತೀಶ್‌ನ ಸಂರಕ್ಷಣೆಯಲ್ಲಿದ್ದಾರೆ. ಇಂದು ಬೆಳಿಗ್ಗೆ ತಾಯಿ ಪ್ರಜ್ಞಾಹೀನರಾಗಿದ್ದಾರೆಂದು ತಿಳಿಸಿದ್ದು, ನೆರೆಮನೆಯವರು ಸೇರಿ ಅವರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಸ್ಥಿತಿ ಗಂಭೀರ ವಾಗಿದೆ ಎಂದು ಕೊಲೆಯತ್ನ ನಡೆದಿರುವುದಾಗಿ ವೈದ್ಯರು ಶಂಖೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾರಾಯಣಿ ಅಮ್ಮರನ್ನು ಪರಿಯಾರಂ ಮೆಡಿಕಲ್ ಕಾಲೇ ಜಿಗೆ ತಲುಪಿಸಲಾಗಿತ್ತು. ಆ ಬಳಿಕ ಅಲ್ಲಿಂದ ಕಲ್ಲಿಕೋಟೆಗೆ ಕೊಂಡುಹೋಗಲಾಗಿದೆ.
ವೈದ್ಯರು ನೀಡಿದ ಸೂಚನೆ ಯಂತೆ ಪುತ್ರ ಸತೀಶನನ್ನು ಕಸ್ಟಡಿಗೆ ತೆಗೆದು ಪ್ರಶ್ನಿಸಿದಾಗ ಕೊಲೆಯತ್ನದ ಬಗ್ಗೆ ತಿಳಿದು ಬಂದಿದೆ.
ಹಲವು ತಿಂಗಳುಗಳಿಂದ ತಾಯಿಗೆ ಚಿಕಿತ್ಸೆ ನಡೆಸುತ್ತಿದ್ದು, ಬಡತನದ ಹಿನ್ನೆಲೆಯಲ್ಲಿ ಮುಂದೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ಈ ಕ್ರೂರ ಕೃತ್ಯಕ್ಕೆ ಮುಂದಾಗಿರುವುದಾಗಿ ಸತೀಶ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.