ಕ್ರಿಕೆಟ್ ಆಟಗಾರ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಸಾವಿನಲ್ಲಿ ನಿಗೂಢತೆ
ಕುಂಬಳೆ: ಕ್ರಿಕೆಟ್ ಆಟಗಾರ ನಾದ ಯುವಕ ನಿಗೂಢ ರೀತಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಾಯ್ಕಾಪು ನಿವಾಸಿ ವೆಂಕಟೇಶ ನಾಯಕ್ರ ಪುತ್ರ ಮಂಜುನಾಥ ನಾಯಕ್ (24) ಸಾವಿಗೀಡಾದ ವ್ಯಕ್ತಿ. ಮಂಜುನಾಥ ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದರು. ರಾತ್ರಿ 11.30ರ ವೇಳೆ ಅವರಿಗೆ ಫೋನ್ ಕರೆ ಬಂದಿತ್ತೆನ್ನಲಾಗಿದೆ. ಕೂಡಲೇ ಹೊರಗೆ ತೆರಳಿದ ಅವರು ದೀರ್ಘ ಹೊತ್ತಾದರೂ ಮರಳಿ ಬಂದಿಲ್ಲ. ಇದರಿಂದ ತಂದೆ ಹಲವುಬಾರಿ ಫೋನ್ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲವೆನ್ನಲಾಗಿದೆ. ಇಂದು ಮುಂಜಾನೆ 5.30ರ ವೇಳೆ ವೆಂಕಟೇಶ್ರ ಚಿಕ್ಕಮ್ಮ ಮನೆಯ ಹೊರಗೆ ಹೋದಾಗ ಅಲ್ಪ ದೂರದಲ್ಲಿರುವ ಮರದಲ್ಲಿ ಮಂಜುನಾಥ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿಸಲಾಗಿದೆ. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ್ದು ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಮಂಜುನಾಥ ಊರಿನಲ್ಲಿ ತಿಳಿಯಲ್ಪಡುವ ಕ್ರಿಕೆಟ್ ಆಟಗಾರನಾಗಿದ್ದರು. ಪ್ರಮುಖ ತಂಡಗಳಲ್ಲಿ ಆಟವಾಡಿದ್ದರೆನ್ನಲಾಗಿದೆ. ನಿನ್ನೆ ರಾತ್ರಿ ಅವರಿಗೆ ಫೋನ್ ಕರೆ ಬಂದಿರುವುದು, ಕೂಡಲೇ ಹೊರಗೆ ತೆರಳಿ ಬಳಿಕ ಮರಳದೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನಿಗೂಢತೆಗೆ ಕಾರ ಣವಾಗಿದೆಯೆಂದು ಹೇಳಲಾಗುತ್ತಿದೆ.
ಮೃತರು ತಂದೆ, ತಾಯಿ ಜಯಂತಿ, ಸಹೋದರ ಅಭಿಷೇಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.