ಕ್ರೈಸ್ತ ಭಗಿನಿಯರ ಬಂಧನ: ಮಜೀರ್ಪಳ್ಳದಲ್ಲಿ ಎಡರಂಗದಿಂದ ಪ್ರತಿಭಟನೆ
ವರ್ಕಾಡಿ: ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಭಗಿನಿಯರನ್ನು ಜೈಲಿ ಗಟ್ಟಿದ ಛತ್ತೀಸ್‌ಘಡ್ ಬಿಜೆಪಿ ಸರಕಾರದ ವಿರುದ್ಧ ಎಡರಂಗದ ವತಿಯಿಂದ ಪ್ರತಿಭಟನಾ ಸಭೆ ಮಜೀರ್ಪಳ್ಳ ಪೇಟೆಯಲ್ಲಿ ನಡೆಸಲಾಯಿತು. ಮಂಡಲ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು ಉದ್ಘಾಟಿಸಿದರು. ಸಿಪಿಐ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜೆಡಿಎಸ್ ಮುಖಂಡ ಡಾ. ಕೆ.ಎ. ಖಾದರ್, ಮೆಹಮೂದ್ ಕೈಕಂಬ, ಸಿದ್ದಿಕ್ ಕೈಕಂಬ, ಬೇಬಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಭಾರತಿ, ಎಸ್. ರಾಮಚಂದ್ರ ಮಾತನಾಡಿದರು. ಎಡರಂಗದ ಮಂಡಲ ಸಂಚಾಲಕ ಜಯರಾಮ ಬಲ್ಲಂಗುಡೇಲ್ ಸ್ವಾಗತಿಸಿ, ನವೀನ್ ಕುಮಾರ್ ತಚ್ಚಿರೆ ವಂದಿಸಿದರು.