ತೃಶೂರ್: ಮತಾಂತರ ಹಾಗೂ ಮಾನವಕಳ್ಳ ಸಾಗಾಟದ ಆರೋಪದಂತೆ ಛತ್ತೀಸ್‌ಗಡ್‌ನಲ್ಲಿ ಅಲ್ಲಿನ ಪೊಲೀಸರಿಂದ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರ ಬಿಡುಗಡೆಗೆ ಸಂಬಂಧಿಸಿ ಪ್ರಧಾನಮಂತ್ರಿಯಿಂದ ತಮಗೆ ಭರವಸೆ ಲಭಿಸಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ತೃಶೂರಿನಲ್ಲಿ ಕ್ರೈಸ್ತ ಧರ್ಮಗುರು ಮಾರ್ ಆಂಡ್ರೋಸ್ ತಾಳತ್ತಿಲ್‌ರನ್ನು ಇಂದು ಬೆಳಿಗ್ಗೆ ಸಂದರ್ಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜೀವ್ ಚಂದ್ರಶೇಖರ್ ಈ ವಿಷಯ ತಿಳಿಸಿದರು.
ಈ ವಿಷಯದ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನನ್ನನ್ನು ಇಂದು ತುರ್ತಾಗಿ ದಿಲ್ಲಿಗೆ ಕರೆಸಿದ್ದಾರೆ. ಇದರಿದಾಗಿ ಇಂದು ಮಧ್ಯಾಹ್ನದೊಳಗೆ ನಾನು ದಿಲ್ಲಿಗೆ ತೆರಳುವೆ. ರಾಜಕೀಯ ಅಥವಾ ವೋಟ್ ಬ್ಯಾಂಕ್‌ಗಾಗಿ ಬಿಜೆಪಿ ಇಂತಹ ಪ್ರಯತ್ನ ನಡೆಸುತ್ತಿಲ್ಲ. ಭಗಿನಿಯರಿಗೆ ಜಾಮೀನು ನೀಡುವುದಕ್ಕೆ ಛತ್ತೀಸ್‌ಘಡ್ ಸರಕಾರ ವಿರೋಧಿಸದು. ಆದ್ದರಿಂದ ಭಗಿನಿಯರು ಶೀಘ್ರ ಜೈಲಿನಿಂದ ಬಿಡುಗಡೆಗೊಳ್ಳಲಿ ದ್ದಾರೆ. ಆದರೆ ಅದು ಯಾವಾಗ ಎಂದು ನನಗೆ ಈಗ ಹೇಳಲು ಸಾಧ್ಯವಿಲ್ಲ. ಕ್ರೈಸ್ತ ಭಗಿನಿಯರ ಬಂಧನದ ಹೆಸರಲ್ಲಿ ಕೆಲವರು ರಾಜಕೀಯ ನಾಟಕ ವಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ.