ಕ್ವಾರ್ಟರ್ಸ್ಗೆ ನುಗ್ಗಿದ ಹೆಬ್ಬಾವು : ಓಡಿಸಲೆತ್ನಿಸಿದಾಗ ಬಿದ್ದದ್ದು ಬಾವಿಗೆ
ಹೊಸದುರ್ಗ: ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸುವವರು ವಾಸಿಸುವ ಬಾಡಿಗೆ ಮನೆಗೆ ಭಾರೀ ದೊಡ್ಡ ಹೆಬ್ಬಾವು ನುಗ್ಗಿದೆ. ಹಾವನ್ನು ಕಂಡವರು ಅದನ್ನು ಓಡಿಸಲೆತ್ನಿಸಿದಾಗ ಹಾವು ಓಡಿ ಹೋಗಿ ಬಾವಿಗೆ ಬಿದ್ದಿದೆ. ವಿಷಯ ತಿಳಿದು ತಲುಪಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಕೊಂಡೊ ಯ್ಯುವು ದರೊಂದಿಗೆ ಆತಂಕ ಪರಿಹಾರವಾಯಿತು.
ತೃಕರಿಪುರ ಒಳವರ ಮುಂಡ್ಯ ಎಂಬಲ್ಲಿನ ಬಸ್ ನಿಲ್ದಾಣ ಸಮೀಪದ ಬಾಡಿಗೆ ಮನೆಯೊಳಗೆ ಹಾವು ಕಂಡು ಬಂದಿದೆ. ಅಸ್ಸಾಂ ನಿವಾಸಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಅಬ್ದುಲ್ ಅಸೀಸ್ ಎಂಬವರು ನಿದ್ರಿಸುವ ಕೊಠಡಿಗೆ ಮೊನ್ನೆ ರಾತ್ರಿ ೧೨ ಗಂಟೆಗೆ ಹೆಬ್ಬಾವು ನುಗ್ಗಿದೆ. ಅದನ್ನು ಕಂಡವರು ಬೊಬ್ಬಿಟ್ಟು ಓಡಿಸಲೆತ್ನಿಸಿದಾಗ ಹಾವು ಬಾವಿಗೆ ಬಿದ್ದಿದೆ. ವಿಷಯ ತಿಳಿದು ನಿನ್ನೆ ಬೆಳಿಗ್ಗೆ ತಲುಪಿದ ಫಾರೆಸ್ಟ್ ರೆಸ್ಕ್ಯೂವರ್ ಕೊಡಕ್ಕಾಡ್ನ ಸಿ. ಅನೂಪ್, ಸಹಾಯಕ ಕೆ. ಲತೀಶ್ ಗಂಟೆಗಳ ಕಾಲ ನಡೆಸಿದ ಪ್ರಯತ್ನದ ಮೂಲಕ ಹಾವನ್ನು ಬಾವಿಯಿಂದ ಮೇಲೆತ್ತಲಾಯಿತು.