ಕ್ವಾರ್ಟರ್ಸ್‌ನಿಂದ ಹಾಡಹಗಲೇ ಹಣ ಕಳವು

ಬದಿಯಡ್ಕ: ಬದಿಯಡ್ಕ ಚೆನ್ನಾರ್‌ಕಟ್ಟೆಯಲ್ಲಿ ಕ್ವಾರ್ಟರ್ಸ್‌ಗೆ ಕಳ್ಳರು ನುಗ್ಗಿ 10,000 ರೂಪಾಯಿ ಗಳನ್ನು ದೋಚಿದ ಬಗ್ಗೆ ದೂರಲಾ ಗಿದೆ. ಈ ಬಗ್ಗೆ ಮೂಡಬಿದ್ರೆ ನಿವಾಸಿ ಕೃಷ್ಣ ಕುಲಾಲ್ (55) ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೃಷ್ಣ ಲಾಲ್ ವಾಸಿಸುವ ಕ್ವಾರ್ಟರ್ಸ್‌ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಹಣ ದೋಚಿದ್ದಾರೆ. ಈ ತಿಂಗಳ ೨೫ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page