ಕ್ವಾರ್ಟರ್ಸ್‌ನ ಶೌಚಾಲಯದೊಳಗೆ ಕುಸಿದುಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಸೀತಾಂಗೋಳಿ: ಕ್ವಾರ್ಟರ್ಸ್‌ನ ಶೌಚಾಲಯದೊಳಗೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಅನ್ಯರಾಜ್ಯ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು.

ಸೀತಾಂಗೋಳಿ ಬಿವರೇಜಸ್ ಮದ್ಯ ದಂಗಡಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಸ್ಸಾಂ ಚೋಂಗಾಯ್ ಗೋನ್‌ಸಿಲಾಗಿರಿ ಚಿರಂಗ್ ನಿವಾಸಿ ಸಂಶೀರ್ ಅಲಿ (30) ಮೃತಪಟ್ಟ ವ್ಯಕ್ತಿ. ಇವರು ಸೀತಾಂಗೋಳಿಯ ಲ್ಲಿರುವ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಮಂಗಳವಾರ ಬೆಳಿಗ್ಗೆ ಕ್ವಾರ್ಟರ್ಸ್‌ನ ಶೌಚಾಲಯ ದೊಳಗೆ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಕೋರೆ ಮಾಲಕ ಫೈಸಲ್‌ರ ನೇತೃತ್ವದಲ್ಲಿ ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸಂಶೀರ್ ಅಲಿಯ ಪತ್ನಿ ಹಾಗೂ ಮಕ್ಕಳು ಕೂಡಾ ಇವರ ಜೊತೆ ಸೀತಾಂಗೋಳಿಯಲ್ಲಿ ವಾಸಿಸುತ್ತಿದ್ದಾರೆ. ಮೃತದೇಹವನ್ನು ಊರಿಗೆ ಕೊಂಡೊ ಯ್ಯಲಾಗುವುದೆಂದು ತಿಳಿಸಲಾಗಿದೆ.

ಸಮೀರ್ ಅಲಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನ ಮೇಲಿಂದ ಅನ್ಯರಾಜ್ಯ ಕಾರ್ಮಿಕರ  ಬಿದ್ದು ಮೃತಪಟ್ಟ ಘಟನೆ ತಿಂಗಳ ಹಿಂದೆ ನಡೆದಿತ್ತು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page