ಕ್ಷೇತ್ರಗಳಲ್ಲಿ ಕಳವು
ಕಾಸರಗೋಡು: ಪಿಲಿಕ್ಕೋಡು ಕರಕ್ಕಕಾವು ಭಗವತೀ ಕ್ಷೇತ್ರಕ್ಕೆ ಕಳ್ಳರು ನುಗ್ಗಿ ಅಲ್ಲಿನ ಮೂರು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ಶ್ರೀ ಕ್ಷೇತ್ರದ ಗರ್ಭಗುಡಿಯ ಬಾಗಿಲನ್ನು ಒಡೆಯುವ ಯತ್ನವನ್ನೂ ಕಳ್ಳರು ನಡೆಸಿದ್ದಾರೆ. ಚಂದೇರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದರ ಹೊರತಾಗಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಶ್ರೀ ಮುತ್ತಪ್ಪನ್ ದೈವಸ್ಥಾನದಲ್ಲಿ ಕೆಲವು ದಿನಗಳ ಹಿಂದೆ ಕಳವು ನಡೆದಿತ್ತು.