ಖತೀಬ್‌ರ ಕೊಠಡಿಗೆ ನುಗ್ಗಿ ಕಳವು : ಕಾರು ಸಹಿತ ಇನ್ನೋರ್ವ ಬಂಧನ
ಕಾಸರಗೋಡು: ಮಸೀದಿಯ ಖತೀಬ್ ವಾಸಿಸುತ್ತಿದ್ದ ಕೊಠಡಿ ಯೊಳಗೆ ನುಗ್ಗಿ ೩೭,೦೦೦ ರೂಪಾ ಯಿ, ವಿದೇಶ ನಿರ್ಮಿತ ವಾಚ್ ಹಾಗೂ ಬೆಲೆ ಬಳುವ ದಾಖಲೆ ಪತ್ರ ಗಳನ್ನು ಒಳಗೊಂಡ ಸೂಟ್‌ಕೇಸ್ ಕಳವು ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಬಂಧಿಸಲಾಗಿದೆ. ಪಳಯಂಗಾಡಿ ವೇಂಙರ ಮೂಲ ಕ್ಕಿಲ್ ಪುನ್ನಕ್ಕಲ್ ನಿವಾಸಿ ಮನ್ಸೂರ್ (೨೮) ಎಂಬಾತನನ್ನು ಚಂದೇರ ಪೊಲೀಸರು ಪಳಯಂಗಾಡಿ ಪೊಲೀಸರ ಸಹಾಯದೊಂದಿಗೆ ಬಂಧಿಸಿದ್ದಾರೆ. ಈತನ ಸಹಚರರಾದ ಕಣ್ಣೂರು ಮುಟ್ಟದ ಮೈಲಾಂಜಿಲ್ ಮುಹಮ್ಮದ್ ಫಯಾಸ್ (೧೯), ನರಿಕ್ಕೋಡ್‌ನ ಮುಹಮ್ಮದ್ ಇಫಾಸ್ (೧೯) ಎಂಬಿವರನ್ನು ಈ ಹಿಂದೆ ಬಂಧಿಸಲಾಗಿತ್ತು. ಕಳ್ಳರು ಸಂಚರಿಸಿದ ಇನ್ನೋವಾ ಕಾರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಾರ್ಚ್ ೧೪ರಂದು ಬೆಳಿಗ್ಗೆ ೬ ಗಂಟೆ ವೇಳೆ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳವು ಪ್ರಕರಣ ನಡೆದಿದೆ. ತುರುತ್ತಿ ಜುಮಾ ಮಸೀದಿ ಖತೀಬ್ ಮಲಪ್ಪುರಂ ತವನ್ನೂರ್ ನಿವಾಸಿ ಹಜ್ಜುಲ್ ಅಕ್ಬರ್‌ರ ಕೊಠಡಿಯಿಂದ ಹಣ ಸಹಿತ ವಿವಿಧ ಸೊತ್ತುಗಳನ್ನು ಕಳವುಗೈಯ್ಯಲಾಗಿದೆ. ಇನ್ನೋವಾ ಕಾರ್‌ನಲ್ಲಿ ತಲುಪಿದ ಮೂರು ಮಂದಿ ತಂಡ ಮಸೀದಿಗೆ ಹೊಂದಿಕೊಂಡಿರುವ ವಾಸಸ್ಥಳದ ಮೇಲ್ಛಾವಣಿ ಕೊರೆದು ಒಳಗೆ ನುಗ್ಗಿದೆ. ಈ ವೇಳೆ ಖತೀಬ್ ಅಲ್ಲಿರಲಿಲ್ಲ. ಅವರು ಮರಳಿ ಬಂದ ಬಳಿಕವೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಕಳ್ಳರ ಕುರಿತು ಸೂಚನೆ ಲಭಿಸಿದೆ. ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಕಳ್ಳರನ್ನು ಗುರುತುಹಚ್ಚಲಾಗಿದೆ.