ಖಾಝಿ ವಿ.ಕೆ. ಅಬೂಬಕರ್ ಹಾಜಿ ನಿಧನ
ಕಾಸರಗೋಡು: ಕರ್ನಾಟಕದ ಮೂಡಬಿದ್ರೆಯ ಖಾಝಿ ಬಂದ್ಯೋಡು ಅಡ್ಕ ನಿವಾಸಿ ವಿ.ಕೆ. ಅಬೂಬಕರ್ ಹಾಜಿ ಅಡ್ಯಾರ್ ಕಣ್ಣೂರು (78) ನಿಧನ ಹೊಂದಿದರು. ವೃದ್ದಾಪ್ಯ ಸಹಜ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದರು. ನಿನ್ನೆ ಬೆಳಿಗ್ಗೆ ನಿಧನ ಸಂಭವಿ ಸಿದೆ. ಇವರು 15 ವರ್ಷಗಳಿಂದ ಮೂಡಬಿದ್ರೆಯಲ್ಲಿ ಖಾಝಿಯಾಗಿದ್ದರು.
ಮೃತರು ಪತ್ನಿ ಆಮಿನ, ಮಕ್ಕಳಾದ ಮುಹಮ್ಮದ್, ಅಸೀಸ್, ರಸಾಕ್, ರುಖಿಯ, ಜಮೀಲ, ಅಳಿಯ-ಸೊಸೆ ಯಂದಿರಾದ ಪಿ. ಮುಹಮ್ಮದ್, ಅಬ್ದುಲ್ ಸಲಾಂ, ಬುಶ್ರಾ, ಸೈದ, ಫೌಸಿಯ, ಸಹೋದರ- ಸಹೋದರಿಯರಾದ ಖಾದರ್, ಇಸ್ಮಾಯಿಲ್, ನಫೀಸ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.