ಕಾಸರಗೋಡು: ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ಕನಿಷ್ಠ ವೇತನವನ್ನು ಪರಿಷ್ಕರಿಸಲು ರಾಜ್ಯ ಸರಕಾರ ವಿಶೇಷ ಸಮಿತಿಗೆ ರೂಪು ನೀಡಿದೆ. ರಾಜ್ಯ ಕಾರ್ಮಿಕ ಆಯುಕ್ತ (ಲೇಬರ್ ಕಮಿಶನರ್)ರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಹೆಚ್ಚುವರಿ ಕಾರ್ಮಿಕ ಆಯುಕ್ತರು (ಉದ್ದಿಮೆ ಸಂಬಂಧಿತ)ರನ್ನು ಸಮಿತಿಯ ಸಂಚಾಲಕರನ್ನಾಗಿಯೂ, ಆಸ್ಪತ್ರೆ ಸಿಬ್ಬಂದಿಗಳ ಮತ್ತು ಆಸ್ಪತ್ರೆ ಆಡಳಿತ ಸಮಿತಿಗಳು ಸೇರಿದಂತೆ ೧೪ ಮಂದಿಯನ್ನು ಇದರ ಸದಸ್ಯರನ್ನಾಗಿ ನೇಮಿಸಲಾಗಿದೆ. ಕೊನೆಗೆ ಎಂಬಂತೆ ೨೦೧೮ ಎಪ್ರಿಲ್‌ನಲ್ಲಿ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು.







