ಖ್ಯಾತ ನಟ ನಿಧನ
ಕಣ್ಣೂರು: ಖ್ಯಾತ ಸಿನಿಮಾ, ಧಾರಾವಾಹಿ, ನಾಟಕ ನಟ, ನಿರ್ದೇಶಕ ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಿ.ವಿ. ರಾಮಚಂದ್ರನ್ (81) ನಿಧನ ಹೊಂದಿದರು. ನಿವೃತ್ತ ಏರ್‌ಪೋರ್ಸ್ ಅಧಿಕಾರಿಯಾಗಿದ್ದರು. ಪಯ್ಯನ್ನೂರು ಮಹಾದೇವ ಗ್ರಾಮಂ ವೆಸ್ಟ್ ನಿವಾಸಿಯಾಗಿದ್ದಾರೆ. ಮೃತರು ಪತ್ನಿ ವತ್ಸ ರಾಮಚಂದ್ರನ್, ಮಕ್ಕಳಾದ ದೀಪ, ದಿವ್ಯ, ಅಳಿಯಂದಿರಾದ ಮಾಧವನ್, ಶಿವಸುಂದರ್, ಸಹೋದರ ಸಹೋದರಿ ಯರಾದ ಪದ್ಮಭೂಷಣ್ ವಿ.ಪಿ. ಧನಂಜಯನ್, ವಿ.ಪಿ. ಮನೋಹರನ್, ವಿ.ಪಿ. ವಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.