ಖ್ಯಾತ ಶಿಶುರೋಗ ತಜ್ಞ ನಿಧನ

ಕಾಸರಗೋಡು: ಕಾಸರಗೋ ಡಿನ ಖ್ಯಾತ ಶಿಶುರೋಗ ತಜ್ಞ ಡಾ| ಬಿ.ಎಫ್. ಮುಹಮ್ಮದ್ (೭೬) ನಿಧನ ಹೊಂದಿದರು. ಕುಂಬಳೆ ನಿವಾಸಿಯಾದ ಇವರು ವಿದ್ಯಾನಗರ ಕಾಲೇಜು ಬಳಿ ವಾಸಿಸುತ್ತಿದ್ದರು. ನಿನ್ನೆ ಮುಂಜಾನೆ ಅಸೌಖ್ಯ ಕಾಣಿಸಿ ಕೊಂಡ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಈ ಹಿಂದೆ ಕಾಸರಗೋಡು ಮಾಲಿಕ್ ದಿನಾರ್ ಆಸ್ಪತ್ರೆ, ಕುಂಬಳೆ ಬಿ.ಎಂ. ಹೆಲ್ತ್ ಸೆಂಟರ್ ಎಂಬೆ ಡೆಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಆರಿಕ್ಕಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಬೀಫಾತ್ತಿಮ, ಮಕ್ಕಳಾದ ಹಾರೂನ್, ಆಮಿರ, ಮುಹಮ್ಮದ್ ಜಾಬಿರ್, ಅಳಿಯ ಸೊಸೆಯಂದಿ ರಾದ ಅಬ್ದುಲ್ ರಹ್ಮಾನ್ ಮೊಗ್ರಾಲ್ ಪುತ್ತೂರು, ಫೆಮಿನ ನುಳ್ಳಿಪ್ಪಾಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page