ಖ್ಯಾತ ಸಂಗೀತ ವಿದ್ವಾಂಸ ಕೆ.ಜಿ. ಜಯನ್ ನಿಧನ
ಕೊಚ್ಚಿ: ಖ್ಯಾತ ಸಂಗೀತ ವಿದ್ವಾಂಸ ಕೆ.ಜಿ. ಜಯನ್ (90) ನಿಧನ ಹೊಂದಿದರು. ತೃಪುಣಿತ್ತರದ ಮನೆಯಲ್ಲಿ ಅಂತ್ಯ ಸಂಭವಿಸಿದೆ. ಚಲನಚಿತ್ರ ನಟ ಮನೋಜ್ ಕೆ. ಜಯನ್ರ ತಂದೆಯಾಗಿದ್ದಾರೆ. ಚಲನಚಿತ್ರ ಗೀತೆ ಹಾಗೂ ಭಕ್ತಿಗೀತೆಗಳ ಮೂಲಕ ಜನರ ಮನ ಗೆದ್ದಿದ್ದರು. ಶಬರಿಮಲೆ ಕ್ಷೇತ್ರ ದೇವಸ್ವಂ ಬೋರ್ಡ್ ಹೊರತಂದ ಏಕ ಭಕ್ತಿಗಾನ ಆಲ್ಬಂ ಶಬರಿಮಲೆ ಅಯ್ಯಪ್ಪನಲ್ಲಿ ಇವರು ಹಾಡಿದ ಗೀತೆಗಳು ಪ್ರಸಿದ್ಧವಾಗಿದ್ದವು. 20ರಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶ ನೀಡಿದ್ದರು. 1996ರಲ್ಲಿ ಹೊರಬಂದ ‘ಭೂಮಿಯಿಲೆ ಮಾಲಕನ್ಮಾರ್’ ಇವರ ಮೊದಲ ಸಿನಿಮಾವಾಗಿದೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, 1991ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ಹರಿವರಾಸನಂ ಪುರಸ್ಕಾರ ಇವರಿಗೆ ಲಭಿಸಿದೆ. ಸಹೋದರ ಕೆ.ಜಿ. ವಿಜಯನ್ 1988ರಲ್ಲಿ ನಿಧನ ಹೊಂದಿದ್ದು ಇವರಿಬ್ಬರೂ ಸೇರಿ ಜಯವಿಜಯ ಎಂಬ ಹೆಸರಲ್ಲಿ ಪ್ರಸಿದ್ಧರಾಗಿದ್ದರು.
ಇವರ ಪತ್ನಿ ಸರೋಜಿನಿ ಈ ಹಿಂದೆ ನಿಧನರಾಗಿದ್ದರು. ಮೃತರು ಇನ್ನೋರ್ವ ಪುತ್ರ ಬಿಜು ಕೆ.ಜಯನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.