ಗಂಭೀರ ಸ್ಥಿತಿಯಲ್ಲಿ ಮುಂದುವರಿಯುತ್ತಿರುವ ವಿ.ಎಸ್.ರ ಆರೋಗ್ಯ
ತಿರುವನಂತಪುರ: ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದರ ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂದುವರಿಯುತ್ತಿದೆ. ವೆಂಟಿಲೇಟರ್‌ನ ಸಹಾಯದೊಂದಿಗೆ ಈಗ ಜೀವ ಉಳಿಸಲಾಗಿದೆ. ಸತತವಾಗಿ ಡಯಾಲಿಸಿಸ್ ನಡೆಸಲು ಮೆಡಿಕಲ್ ಬೋರ್ಡ್ ಸೂಚಿಸಿದೆ. ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾದ ಹಿನ್ನೆಲೆಯಲ್ಲಿ ನಿನ್ನೆ ಎರಡು ಬಾರಿ ಡಯಾಲಿಸಿಸ್ ಮೊಟಕುಗೊಂಡಿದೆ. ರಕ್ತದೊತ್ತಡ ಹಾಗೂ ಮೂತ್ರಕೋಶಗಳ ಚಟುವಟಿಕೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಚಿಕಿತ್ಸೆ ಮುಂದುವರಿಯುತ್ತಿದೆ. ಜೂನ್ ೨೩ರಂದು ಹೃದಯಾ ಘಾತದ ಹಿನ್ನೆಲೆಯಲ್ಲಿ ವಿ.ಎಸ್.ರನ್ನು ತಿರುವನಂತಪುರ ಎಸ್‌ಯುಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.