ಗಡಿನಾಡಿನ ಪ್ರಾಧ್ಯಾಪನಿಗೆ ಅಮೆರಿಕನ್ ಪೇಟೆಂಟ್
ಮುಳ್ಳೇರಿಯ: ಮುಳ್ಳೇರಿಯ ನಿವಾಸಿ ತಳಿಪರಂಬ ಸರ್ ಸೈಯದ್ ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕÀ ಡಾ. ಅಶ್ವನಿ ಕುಮಾರ್‌ಗೆ ಲಿಪಿಡ್ ನಾನೋ ಪಾರ್ಟಿಕಲ್‌ಗಳ ಮುಖಾಂ ತರ ಶರೀರದಲ್ಲಿ ನ್ಯೂಕ್ಲಿಕ್ ಆಮ್ಲಗಳ (ಎಮ್.ಆರ್.ಎನ್.ಎ) ಡೆಲಿವರಿ ಎಂಬ ನೂತನ ವೈಜ್ಞಾನಿಕ ವಿಭಾಗದಲ್ಲಿ ನಡೆಸಿದ ಪ್ರಧಾನ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಲಭಿಸಿದೆ. ಅಮೆರಿಕದ ಒರೆಗೊನ್ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ, ಪ್ರೊಫಸರ್ ಗೌರವ್ ಸಹಾಯ್ ಅವರ ಮಾರ್ಗ ನಿರ್ದೇಶನದಲ್ಲಿ, 2016-18ರ ಪೋಸ್ಟ್ ಡಾಕ್ಟರ್ ಫೆಲೋಶಿಪ್‌ನ ಭಾಗವಾಗಿ ನಡೆಸಿದ ಸಂಶೋಧನೆ ಈ ಅಂಗೀ ಕಾರಕ್ಕೆ ಪಾತ್ರವಾಯಿತು. ಪೇಟೆಂಟಿಗಾಗಿ 2018ರಲ್ಲಿ ಅರ್ಜಿ ಸಲ್ಲಿಸಿದರೂ ಕಾನೂನು ಪ್ರಕ್ರಿಯೆಗಳು ಪೂರ್ಣ ಗೊಳಿಸಿ 2024ರಲ್ಲಿ ಪೇಟೆಂಟ್ ಲಭಿಸಿದೆ. 2039ರ ವರೆಗೆ ಇದರ ಕಾಲಾವದಿ.
ದೇಹದಲ್ಲಿ ನಿರ್ದಿಷ್ಟ ಜೀವ ಕೋಶಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಎಂ.ಆರ್.ಎನ್.ಎ ಗಳನ್ನು ತಲುಪಿಸು ವುದು ಅತ್ಯಂತ ಪ್ರಾಧಾನ್ಯ ಹಾಗೂ ಪ್ರಯಾಸಕರ ವಿಷಯವಾಗಿದೆ. ಲಿಪಿಡ್ ನಾನೊ ಪಾರ್ಟಿಕಲ್‌ಗಳನ್ನು ಬಳಸು ವುದು ಈ ಸವಾಲಿಗಿರುವ ಪ್ರಧಾನ ಪರಿಹಾರ. ಇಂತಹ ನ್ಯಾನೋ ಪಾರ್ಟಿ ಕಲ್‌ಗಳ ಉತ್ಪಾದನೆಗೆ ಉಪಯೋ ಗಿಸುವ ನಾಲ್ಕು ತರಹದ ಲಿಪಿಡ್‌ಗಳಲ್ಲಿ ಕೊಲೆಸ್ಟೆರೋಲ್ ಒಂದು ಘಟಕ. ಈ ಕೊಲೆಸ್ಟೆರೋಲನ್ನು ಬದಲಾಯಿಸಲು ಸಸ್ಯಜನ್ಯ ಸ್ಟೇರೋಲ್ ಹಾಗೂ ವಿಟಮಿನ್ ಡಿ ಅನಲೋಗ್‌ಗಳನ್ನು ಬಳಸಿ ನಿರ್ಮಿಸಿದ ಮೋಲಿಕ್ಯುಲರ್ ಲೈಬ್ರರಿಯ ಮುಖಾಂತರ ನಡೆಸಿದ ಸಂಶೋಧನೆಯು ಪೇಟೆಂಟ್‌ಗೆ ಆಧಾರವಾಯಿತು. ಖ್ಯಾತ ಯಕ್ಷಗಾನ ಕಲಾವಿದ, ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ-ಪುಷ್ಪಲತ ದಂಪತಿ ಪುತ್ರನಾದ ಡಾ ಅಶ್ವನಿ ಕುಮಾರ್ ಅಂಗವಾಗಿರುವ ಸಂಶೋ ಧನ ತಂಡವು ನಿರ್ಮಿಸಿದ ನವೀನ ಲಿಪಿಡ್ ನ್ಯಾನೋ ಪಾರ್ಟಿಕಲ್ ಫಾರ್ಮುಲೇಷನ್ ತಂತ್ರ ಜ್ಞಾನದ ಪರವಾನಗಿಯನ್ನು ಎಂ ಆರ್ ಎನ್ ಎ ಲಸಿಕೆಗಳ ಪ್ರಧಾನ ಉತ್ಪಾದಕರಾದ ಅಮೆರಿಕದ ಬಾಸ್ಟನ್ನಲ್ಲಿರುವ “ಮೋಡರ್ನ ಥೇರಾಪುಟಿಕ್ಸ್” ಎಂಬ ಕಂಪನಿ ಪಡೆದಿದೆ. ಈ ಸಂಶೋಧನಾ ಪ್ರಬಂಧವು “ನೇಚರ್ ಕಮ್ಯುನಿಕೇಶನ್” ಎಂಬ ಪಾಶ್ಚಾತ್ಯ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಣೆಯಾಗಿದೆ.