ಗಡಿ ಉಸ್ತುವಾರಿ ಸಚಿವರಾಗಿ ಎಚ್.ಕೆ. ಪಾಟೀಲ ನೇಮಕ: ಕನ್ನಡ ಪರ ಸಂಘಟನೆಗಳಿಂದ ಅಭಿನಂದನೆ
ಮಂಜೇಶ್ವರ: ಗಡಿ ಭಾಗದ ಕನ್ನಡ ಸಂಘಟನೆಗಳ ದೀರ್ಘಕಾಲದ ಬೇಡಿಕೆ ಯಾಗಿದ್ದ ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಪರಿಹಾರ ಉಂಟಾಗಿದೆ. ಹಿರಿಯ ಸಚಿವ ಎಚ್.ಕೆ. ಪಾಟೀಲರನ್ನು ಗಡಿ ಹಾಗೂ ಜಲ ವಿವಾದಗಳ ಉಸ್ತುವಾರಿ ಸಚಿವರಾಗಿ ನೇಮಕಗೊಳಿಸಲಾ ಗಿದೆ. ಇವರ ನೇಮಕ ಆದೇಶಕ್ಕೆ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕೋಶಾಧಿಕಾರಿ ಶ್ರೀಕಾಂತ ನೆಟ್ಟಣಿಗೆ, ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪದಾಧಿಕಾರಿಗಳಾದ ಎನ್. ಚನಿಯಪ್ಪ ನಾಯ್ಕ, ಅಖಿಲೇಶ್ ನಗುಮುಗಂ, ಝಡ್.ಎ. ಕಯ್ಯಾರ್ ಅಭಿನಂದಿಸಿದ್ದಾರೆ. ನೇಮಕ ಆದೇಶ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಕನ್ನಡಪರ ಸಂಘಸಂಸ್ಥೆಗಳು ಅಭಿನಂದಿಸಿವೆ.