ಗಣಿ ಕಂಪೆನಿಯಿಂದ ಹಣ ಪಡೆದ ಆರೋಪ: ಮುಖ್ಯಮಂತ್ರಿ ಪುತ್ರಿಯ ವಿಚಾರಣೆ

ತಿರುವನಂತಪುರ: ಖನಿಜಯುಕ್ತ ಮರಳು ಗಣಿಗಾರಿಕೆ ಕಂಪೆನಿಯಿಂದ ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (ಸಿ.ಎಂ.ಆರ್. ಎಲ್) ನಿಂದ ಭಾರೀ ಪ್ರಮಾಣದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್‌ರನ್ನು ಗಂಭೀರ ಅಪರಾಧ ತನಿಖಾ ಕಚೇರಿ (ಎಸ್‌ಎಫ್‌ಐಒ) ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದರು. ವೀಣಾರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದರು.

ಕೇಂದ್ರ ಕಾರ್ಪೊರೇಟ್ ವ್ಯವ ಹಾರಗಳ ಸಚಿವಾಲಯದ ಅಧೀನ ದಲ್ಲಿ ಎಸ್‌ಎಫ್‌ಐಒ ಕಾರ್ಯವೆಸಗು ತ್ತಿದೆ. ಎಸ್‌ಎಫ್‌ಐಒ ಅಧಿಕಾರಿಗಳು ವೀಣಾರನ್ನು ಚೆನ್ನೈಯಲ್ಲಿರುವ ತಮ್ಮ ಕಚೇರಿಗೆ ಕರೆಸಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಕೊಚ್ಚಿನ್ ಮಿನರಲ್ಸ್ ಆಂಡ್ ಕುಟೈಲ್ಸ್ ಲಿಮಿಟೆಡ್ ಕಂಪೆನಿಯಿಂದ ವೀಣಾ ವಿಜಯನ್ ತಮ್ಮ ಸಂಸ್ಥೆಗೆ 1.72 ಕೋಟಿ ರೂ. ಪಡೆದಿದ್ದರೆಂದು ಆರೋಪಿಸಲಾಗಿದೆ. ಖನಿಜಮುಕ್ತ ಮರಳು ಗಣಿಗಾರಿಕೆ ನಡೆಸಿದ ಆರೋಪವು ಆ ಕಂಪೆನಿಯ ಮೇಲೆ ಉಂಟಾಗಿದೆ. ವೀಣಾ ವಿಜಯನ್ ಬೆಂಗಳೂರಿನಲ್ಲಿ  ಎಕ್ಸಾಲಜಿಕಲ್ ಸಲ್ಯೂಶಷನ್ ಕಂಪೆನಿಗೆ ನೀಡಿದ ಸೇವೆಗಳಿಗೆ ಪ್ರತಿಯಾಗಿ ಈ ಮೊತ್ತವನ್ನು ಸ್ವೀಕರಿಸಲಾಗಿದೆ ಎಂದು ವೀಣಾ ವಿಜಯನ್ ಸಮರ್ಥಿಸಿಕೊಂಡಿದ್ದಾರೆ.

You cannot copy contents of this page