ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವಕ ನಾಪತ್ತೆ

ಮುಳ್ಳೇರಿಯ: ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮುಳಿಯಾರು ಪಂಚಾಯತ್ ವ್ಯಾಪ್ತಿಯ ಮಲ್ಲ ಪುಂಜಂಗೋಡು ನಾರಾಯಣೀಯಂ ಹೌಸ್‌ನ ಚಂದ್ರನ್ ಎಂಬವರ ಪುತ್ರ ಕೆ. ರಾಗೇಶ್ (35) ನಾಪತ್ತೆಯಾಗಿರು ವುದಾಗಿ ತಿಳಿದು ಬಂದಿದೆ. ಈ ಕುರಿತು ತಾಯಿ ಕೆ. ವತ್ಸಲ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮೇ 5ರಂದು ಸಂಜೆ 4 ಗಂಟೆಗೆ ರಾಗೇಶ್ ಮನೆಯಿಂದ ಹೊರಟು ಹೋಗಿರುವು ದಾಗಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಆತ ಗಲ್ಫ್‌ಗೆ ತಲುಪಿಲ್ಲವೆನ್ನಲಾಗಿದೆ. ಮರಳಿ ಮನೆಗೂ ಬಂದಿಲ್ಲವೆಂದು ತಿಳಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page